ಏಷ್ಯನ್ ಗೇಮ್ಸ್ 2018: ಬೆಳ್ಳಿಗೆ ಮುತ್ತಿಟ್ಟ ಭಾರತದ ಆರ್ಚರಿ ವನಿತೆಯರು!

ಜಕಾರ್ತದಲ್ಲಿ ನಡೆಯುತ್ತಿರುವ 2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಡದಲ್ಲಿ ಭಾರತೀಯ ಅಥ್ಲೀಟ್ ಗಳ ಪದಕ ಬೇಟೆ ಮುಂದುವರೆದಿದ್ದು ಆರ್ಚರಿಯಲ್ಲಿ ಭಾರತೀಯ ವನಿತೆಯರ ತಂಡ ಬೆಳ್ಳಿಗೆ ಮುತ್ತಿಟ್ಟಿದ್ದಾರೆ.
ದಕ್ಷಿಣ ಕೋರಿಯಾದ ವಿರುದ್ಧ ಭಾರತೀಯ ಆರ್ಚರಿ ವನಿತೆಯರ ತಂಡ 228-231 ಅಂಕಗಳು, ಅಂದರೆ ಮೂರು ಅಂಕಗಳ ಅಂತರದಿಂದ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಆರ್ಚರಿ ವನಿತೆಯರ ತಂಡ ತೈವಾನ್ ತಂಡದ ವಿರುದ್ಧ 225-222 ಅಂಕಗಳೊಂದಿಗೆ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.
ಏಷ್ಯನ್ ಗೇಮ್ಸ್ 2018ರಲ್ಲಿ ಭಾರತ ಪ್ರಸಕ್ತ 8 ಚಿನ್ನ, 15 ಬೆಳ್ಳಿ ಹಾಗೂ 20 ಕಂಚಿನ ಪದಕಗಳೊಂದಿಗೆ ಒಟ್ಟಾರೆ 43 ಪದಕಗಳನ್ನು ಗೆದ್ದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ