ಜಕಾರ್ತದಲ್ಲಿ ಚಿನ್ನ ಗೆದ್ದ ತಜಿಂದರ್ ಹಿಂದಿದೆ ನೋವಿನ ಕತೆ

ಚಂಡಿಗಢ: ಜಕಾರ್ತದಲ್ಲಿ ಚಿನ್ನ ಗೆಲ್ಲುವ ಜೊತೆಗೆ ದಾಖಲೆ ಬರೆದ ಯುವ ಅಥ್ಲೀಟ್ ತಜಿಂದರ್ ಸಿಂಗ್ ಹಿಂದೆ ನೋವಿನ ಕತೆ ಇದೆ. ತಜಿಂದರ್ ಸಿಂಗ್ ತಂದೆ ಸರ್ದಾರ್ ಕರಮ್ ಸಿಂಗ್ ಕ್ಯಾನ್ಸ್‍ರ್‍ನಿಂದ ಬಳಲುತ್ತಿದ್ದಾರೆ.ಇದೀಗ ಕ್ಯಾನ್ಸರ್ ಅವರ ಮೆದುಳಿಗೂ ತಗುಲಿದ್ದು ಪಂಚಕುಳ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇಷ್ಟೆ ಅಲ್ಲ ಏಷ್ಯನ್ ಗೇಮ್ಸೆ ಗೆ ತರಬೇತಿ ಪಡೆಯಲು ತಜೀಂದರ್ ಬಳಿ ಹಣ ಕೂಡ ಇರಲಿಲ್ಲ.
23 ವರ್ಷದ ತಜಿಂದರ್ ಏಷ್ಯನ್‍ಗೇಮ್ಸ ಗೆ ತೆರೆಳುವ ಮುನ್ನ ತರಬೇತಿಯ ಖರ್ಚಿನ ಕುರಿತು ಮಾತನಾಡಿದ್ದರು. ನಾನು ಹಾಕಿ ಕೊಂಡಿರುವ ಶೂಗಳು 10 ಸಾವಿರ ರೂಪಾಯಿ ಖರ್ಚಾಗಿದ್ದು ಎರಡು ತಿಂಗಳು ಕೂಡ ಬಾಳಿಕೆ ಬರಲ್ಲ. ವೃತ್ತಿಪರ ತರಬೇತಿಗೆ 50 ಸಾವಿರ ರೂಪಾಯಿ ಖರ್ಚು ಬರುತ್ತದೆ ಎಂದಿದ್ದರು. ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸಿಕೊಳ್ಳಬೇಕಾಗುತ್ತದೆ ಡೈಯಟ್ ಮಾಡಬೇಕು ಮತ್ತು ಒಳ್ಳೆಯ ಆಹಾರವನ್ನ ಸೇವಿಸಬೇಕೆಂದಿದ್ದರು.
ಚಿನ್ನ ಗೆದ್ದಿರುವ ಅಥ್ಲೀಟ್ ತಜೀಂದರ್ ಅಥ್ಲೀಟ್‍ಗೂ ಕಾಲಿಡುವ ಮುನ್ನ ಕ್ರಿಕೆಟ್‍ರ್ ಆಗಬೇಕೆಂದು ಬಯಸಿದ್ದರು. ಆದ್ರೆ ತಾಜೀಂದರ್ ಸಾಧ್ಯವಾಗದೇ ಅಥ್ಲೀಟ್‍ನ್ನ ವೃತ್ತಿ ಜೀವನವಾಗಿ ತೆಗೆದುಕೊಳ್ಳಬೇಕಾಯಿತು.ತಜಿಂದರ್ ತಮ್ಮ ತಂದೆಯ ಪ್ರೇರಣೆಯಿಂದಲೇ ದೊಡ್ಡ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ