ಅಶ್ವಿನ್‍ಗೆ ಇಂಜುರಿ: ನಾಲ್ಕನೆ ಟೆಸ್ಟ್‍ನಲ್ಲಿ ಆಡೋದು ಡೌಟ್

ಲಂಡನ್:ಟೀಂ ಇಂಡಿಯಾದ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಗಾಯದ ಸಮಸ್ಯೆಗೆ ಗುರಿಯಾಗಿರೋದ್ರಿಂದ ಆಂಗ್ಲರ ವಿರುದ್ಧ ನಾಲ್ಕನೆ ಟೆಸ್ಟ್ ಪಂದ್ಯ ಅಡೋದು ಅನುಮಾನದಿಂದ ಕೂಡಿದೆ.
ಮೂಲಗಳ ಪ್ರಕಾರ ಮೊನ್ನೆ ನಡೆದ ಅಶ್ವಿನ್ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಫಿಟ್ ಆಗಿರಲಿಲ್ಲ. ಕಾಲು ನೋವಿನಿಂದ ಬಳಲುತ್ತಿದ್ದ ಈ ತಮಿಳುನಾಡು ಸ್ಪಿನ್ನರ್ ಬೌಲಿಂಗ್ ಹಾಕಲು ಪರದಾಡುತ್ತಿದ್ದರು.
ವೇಗಿಗಳಿಗೆ ಪಿಚ್ ನೆರವು ನೀಡುತ್ತಿದ್ದರಿಂದ ಅಶ್ವಿನ್ ಅವಶ್ಯಕತೆ ಬೇಕಾಗಿರಲಿಲ್ಲ. ಅಶ್ವಿನ್ ಇಡೀ ಪಂದ್ಯದಲ್ಲಿ ಒಂದು ವಿಕೆಟ್ ಪಡೆದರು. ಅಶ್ವಿನ್ ಸೌತ್‍ಹ್ಯಾಂಪ್ಟನ್ ಟೆಸ್ಟ್ ಪಂದ್ಯದಲ್ಲಿ ಆಡೋದು ಬಹುತೇಕ ಅನುಮಾನದಿಂದ ಕೂಡಿದೆ.
ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾ,ಕುಲ್‍ದೀಪ್
ಅಶ್ವಿನ್ ಹೊರ ನಡೆಯೋದು ಪಕ್ಕಾ ಆಗಿರೋದ್ರಿಂದ ತಂಡದ ಮತ್ತೊರ್ವ ಆಲ್‍ರೌಂಡರ್ ರವೀಂದ್ರ ಜಡೇಜಾ ಆಡುವ ಫೇವರಿಟ್ ಆಟಗಾರ ಎನಿಸಿದ್ದಾರೆ.ತಂಡದಲ್ಲಿಅವಕಾಶಕ್ಕಾಗಿ ಕಾಯುತ್ತಿರುವ ರವೀಂದ್ರ ಜಡೇಜಾ ಅಶ್ವಿನ್ ಜಾಗದಲ್ಲಿ ಆಡುವ ಫೇವರಿಟ್ ಎನಿಸಿದ್ದಾರೆ. ತಂಡಕ್ಕೆ ಸ್ಪಶಲ್ ಸ್ಪಿನ್ನರ್ ಬೇಕೆಂದು ನಾಯಕ ಕೊಹ್ಲಿ ನಿಶ್ಚಯಿಸಿದ್ರೆ ತಂಡದ ಚೈನಾಮನ್ ಸ್ಪಿನ್ನರ್ ಕುಲ್‍ದೀಪ್ ಯಾದವ್‍ಗೆ ಮಣೆಹಾಕಬಹುದು. ಆದರೆ ಕುಲ್‍ದೀಪ್ ಎರಡನೇ ಟೆಸ್ಟ್ ನಲ್ಲಿಫ್ಲಾಪ್ ಆಗಿದ್ದರಿಂದ ಕುಲ್‍ದೀಪ್ ಬದಲು ರವೀಂದ್ರ ಜಡೇಜಾ ಕನ್ನಕಿಳಿಯೊ ಸಾದ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ