ಬಿಜೆಪಿ ಪಕ್ಷ ಹುಚ್ಚಾಸ್ಪತ್ರೆ ಇದ್ದಂತೆ: ಬಿ.ಕೆ. ಹರಿಪ್ರಸಾದ

ಹುಬ್ಬಳ್ಳಿ:- ಬಿಜೆಪಿ ಪಕ್ಷವು ಹುಚ್ಚಾಸ್ಪತ್ರೆ ಇದ್ದಂತೆ, ಸಂಸದ ಪ್ರಲ್ಹಾದ ಜೋಶಿ ಅಲ್ಲಿಯ ರೋಗಿ. ಹೀಗಾಗಿ ಬಿಜೆಪಿ ಹುಚ್ಚರು ಬಾಯಿಗೆ ಬಂದಂತೆ ಮಾತನಾಡುತ್ತರೆಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದ ಪ್ರಲ್ಹಾದ ಜೋಶಿ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬರು ಹುಚ್ಚಾ ಎಂದು ಜರಿದಿದ್ದರು, ಹೀಗಾಗಿ ಇಂದು ಸಂಸದರ ಮಾತಿಗೆ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೇ ನಿರುದ್ಯೋಗಿ ಯುವಕರು ಐಸಿಸ್ ಸೇರುತ್ತಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದು ಸರಿಯಾಗಿದೆ. ಕೇಂದ್ರ ಸರ್ಕಾರ ಯುವಕರಿಗೆ ಉದ್ಯೋಗ ನೀಡಲು ವಿಫಲವಾಗಿದೆ. ಜನರ ನಡುವೆ ವೈಷಮ್ಯ ಹುಟ್ಟುಹಾಕಿ ಒಡೆದು ಆಳಲಾಗುತ್ತಿದೆ. ಹೀಗಾಗಿ ಕೆಲಸವಿಲ್ಲದ ಯುವಕರು ವಿದ್ರೋಹಿ ಕೆಲಸಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು. ಆರ್‌ಎಸ್‌ಎಸ್ ಮತ್ತು ಬಿಜೆಪಿಯವರದ್ದು ಮುಸ್ಲೀಮ್ ಬ್ರದರ್‌ಹುಡ್ ಮನಸ್ಥಿತಿ. ಅಲ್ಪಸಂಖ್ಯಾತರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಾರೆ. ಕೇರಳಕ್ಕೆ ಬರುವ ಅಂತರಾಷ್ಟ್ರೀಯ ನೆರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಬಾರದು. ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರ್ಕಾರ ಇರುವುದರಿಂದ ಕೇಂದ್ರ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದ್ದು, ಕೇರಳಕ್ಕೆ ಪರಿಹಾರ ನೀಡಲು ಮೋದಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದರು. ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ಹೋರಾಟ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹೊಂದಾಣಿಕೆ ಜಿಲ್ಲಾ ಮಟ್ಟದ ಮುಖಂಡರಿಗೆ ಬಿಟ್ಟ ವಿಚಾರ ಎಂದು ಸ್ಪಷ್ಟ ಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ