ಗುರು ಶಾಸ್ತ್ರಿಗೆ ಕಾಣಿಕೆಯಾಗಿ ಷಾಂಪೇನ್ ಕೊಟ್ಟ ಕೊಹ್ಲಿ..!

ನಾಟಿಂಗ್ಯಾಮ್: ಆಂಗ್ಲರ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆದ್ದ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಕೊಹ್ಲಿ ತಮ್ಮ ಗುರು ರವಿಶಾಸ್ತ್ರಿಗೆ ಗುರು ಕಾಣಿಕೆಯಾಗಿ ಷಾಂಪೇನ್ ಕೊಟ್ಟಿದಾರೆ.
ಬುಧವಾರ ಐದನೇ ದಿನ ಆಂಗ್ಲರ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಗೆಲ್ಲುತ್ತಿದ್ದಂತೆ ತಮ್ಮ ಡ್ರೆಸಿಂಗ್ ರೂಮ್‍ಗೆ ತೆರೆಳಿದ ಕ್ಯಾಪ್ಟನ್ ಕೊಹ್ಲಿ ತಮ್ಮ ಗುರು ಹಾಗೂ ತಂಡದ ಕೋಚ್ ರವಿ ಶಾಸ್ತ್ರಿಗೆ ಗುರು ಕಾಣಿಕೆಯಾಗಿ ಷಾಂಪೇನ್‍ನನ್ನ ಹಸ್ತಾಂತರಿಸಿದರು. ನೇರ ಪ್ರಸಾರದಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿದ್ದು ಅಭಿಮಾನಿಗಳು ಫೋಟೋಗಳನ್ನ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಈ ಹಿಂದಿನ ಎರಡು ಟೆಸ್ಟ್ ಪಂದ್ಯಗಳನ್ನ ಸೋತಾಗ ಸಾಕಷ್ಟು ಟೀಕೆಗಳನ್ನ ನಾಯಕ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಎದುರಿಸಿದ್ದರು. ಮೂರನೇ ಟೆಸ್ಟ್ ಪಂದ್ಯವನ್ನ ಗೆಲ್ಲುವ ಮೂಲಕ ಸರಣಿಯನ್ನ ಟೀಂ ಇಂಡಿಯಾ ಜೀವಂತರವಾಗಿರಿಸಿಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ