ಏಷ್ಯನ್ ಗೇಮ್ಸ್ 2018: ಟೆನ್ನಿಸ್ ನಲ್ಲಿ ಪ್ರಜ್ಞೇಶ್ ಗೆ ಕಂಚು!

ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ರೋಹನ್ ಬೋಪಣ್ಣ- ಶರಣ್ ಜೋಡಿ ಡಬಲ್ಸ್ ನಲ್ಲಿ ಚಿನ್ನ ಗೆದ್ದು ಸಾಧನೆ ಮೆರೆದರೆ ಇದೀಗ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಕಂಚಿನ ಪದಕ ಗಳಿಸಿದ್ದಾರೆ.
ಶುಕ್ರವಾರ ನಡೆದ ಏಷ್ಯನ್ ಗೇಮ್ಸ್ ಪುರುಷರ ಟೆನ್ನಿಸ್ ಸೆಮಿಫೈನಲ್ಸ್ ನಲ್ಲಿ ಉಜ್ಬೇಕಿಸ್ತಾನದ ಆಟಗಾರ ಡೆನಿಸ್ ಇಸ್ಟೊಮಿನ್  ಅವರ ವಿರುದ್ಧ ಪ್ರಜ್ಞೇಶ್ 6-2, 6-2 ಸೆಟ್ ಗಳಿಂದ ಪರಾಜಿತರಾದರು.
ನಿನ್ನೆ (ಗುರುವಾರ) ಮಹಿಳಾ ಟೆನ್ನಿಸ್ ಸಿಂಗಲ್ಸ್ ಸೆಮಿಫೈನಲ್ಸ್ ನಲ್ಲಿ ಭಾರತದ ಅಂಕಿತಾ ರೈನಾ ಸಹ ಕಂಚಿನ ಪದಕ ಗಳಿಸಿದ್ದರು.
ಬ್ಯಾಡ್ಮಿಂಟನ್ ನಲ್ಲಿ ಪ್ರಣೋಯ್, ಶ್ರೀಕಾಂತ್ ಗೆ ಸೋಲು
ಏಷ್ಯನ್ ಗೇಮ್ಸ್ ಬ್ಯಾಡ್ಮಿಂತನ್ ಪಂದ್ಯಾವಳಿಯಲ್ಲಿ ಭಾರತದ ಪದಕ ಭರವಸೆ ಮೂಡಿಸಿದ್ದ ಎಚ್.ಎಸ್. ಪ್ರಣೋಯ್ ಹಾಗೂ ಕಿಡಂಬಿ ಶ್ರೀಕಾಂತ್ ಸೋಲಿನೊಡನೆ ನಿರಾಶೆ ಮೂಡಿಸಿದ್ದಾರೆ.
ಪ್ರಣೋಯ್ ಥಾಯ್ ಲ್ಯಾಂಡಿನ ಕಂಟಾಫಾನ್ ವಾಂಗ್ಚಾರೋ ಅವರಿಗೆ 12-21, 21-15, 15-21 ಸೆಟ್ ಗಳಿಂದ ಶರಣಾಗಿದ್ದ ಪ್ರಣೋಯ್ ಅಂತಿಮವಾಗಿ 2-6, 2-6 ನೇರ ಸೆಟ್ ಗಳಿಂದ ಪರಾಜಯ ಅನುಭವಿಸಿದರು.
ಭಾರತದ ಇನ್ನೋರ್ವ ಆಟಗಾರ ಕಿಡಂಬಿ ಶ್ರೀಕಾಂತ್ ಸಹ ಹಾಂಗ್ ಕಾಂಗ್ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ  21-23, 19-21 ನೇರ ಸೆಟ್ ಗಳ ಸೋಲನುಭವಿಸಿ  18 ನೇ ಆವೃತ್ತಿಯ ಏಷ್ಯಾಡ್ ನಿಂದ ಹೊರಬಿದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ