ಏಷ್ಯನ್ ಗೇಮ್ಸ್ 2018: ರೋಯಿಂಗ್‌ನಲ್ಲಿ ಭಾರತಕ್ಕೆ 1 ಚಿನ್ನ, 2 ಕಂಚು!

ಜಕಾರ್ತ: 2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪುಟಗಳು ಚಿನ್ನದ ಬೇಟೆ ಮುಂದುವರೆಸಿದ್ದಾರೆ. ಕ್ವಾಡ್ರುಪಲ್ ಸ್ಕಲ್ಸ್ ರೋಯಿಂಗ್ ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಗೆದ್ದಿದೆ.
ಭಾರತೀಯ ಕ್ರೀಡಾಪಟುಗಳಾದ ಸವರಣ್ ಸಿಂಗ್, ದತ್ತು ಭೋಕನಲ್, ಓಂ ಪ್ರಕಾಶ್ ಹಾಗೂ ಸುಖಮಿತ್ ಕ್ವಾಡ್ರುಪಲ್ ಸ್ಕಲ್ಸ್ ರೋಯಿಂಗ್ ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದು ಈ ಮೂಲಕ ಭಾರತ ಐದನೇ ಚಿನ್ನದ ಪದಕವನ್ನು ಗೆದ್ದಿದೆ.
ಇನ್ನು ಕಡಿಮೆ ಗಾತ್ರದ ಡಬಲ್ ಸ್ಕಲ್ಸ್ ರೋಯಿಂಗ್ ನಲ್ಲಿ ರೋಹಿತ್ ಕುಮಾರ್ ಹಾಗೂ ಭಗವಾನ್ ದಾಸ್ ಮತ್ತು ಕಡಿಮೆ ಗಾತ್ರದ ಸಿಂಗಲ್ ರೋಯಿಂಗ್ ನಲ್ಲಿ ದುಶ್ಯಂತ್ ಕಂಚು ಪದಕ ಜಯಿಸಿದ್ದಾರೆ.
ಭಾರತ ಇಲ್ಲಿಯವರೆಗೂ 5 ಚಿನ್ನ, 4 ಬೆಳ್ಳಿ ಮತ್ತು 12 ಕಂಚಿನ ಪದಕ ಗೆಲ್ಲುವ ಮೂಲಕ ಒಟ್ಟಾರೆ 21 ಪದಕಗಳನ್ನು ಗಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ