ವಿರಾಟ್ ಕೊಹ್ಲಿ ಪಡೆಯನ್ನು ಕೆಣಕ್ಕಿದ್ದ ಇಂಗ್ಲೆಂಡಿಗರಿಗೆ ಮಂಗಳಾರತಿ!

ನಾಟಿಂಗ್ಹ್ಯಾಮ್: ಟೀಂ ಇಂಡಿಯಾ ಆಟಗಾರರು ಇನ್ನು ಬಚ್ಚಾಗಳು, ಪುರುಷರ ಮುಂದೆ ಅವರು ಇನ್ನು ಹುಡುಗರ ರೀತಿ ಆಡ್ತಾರೆ. ಕೊಹ್ಲಿ ಪಡೆಯನ್ನು ಸ್ಟುಪೀಡ್ ಎಂದು ಗೇಲಿ ಮಾಡಿದ್ದ ಇಂಗ್ಲೆಂಡಿಗರಿಗೆ ಟೀಂ ಇಂಡಿಯಾ ಆಟಗಾರರು ಸರಿಯಾಗಿ ತಿರುಗೇಟು ನೀಡಿದ್ದಾರೆ.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಬ್ಯಾಟಿಂಗ್ ಮಾಡಲು ತಿಣುಕಾಡಿದ್ದರು. ಇನ್ನು ಪಂದ್ಯವನ್ನು ತಂಡ ಕೈಚೆಲ್ಲಿತ್ತು. ಇದೇ ಪಂದ್ಯವನ್ನು ಮುಂದಿಟ್ಟುಕೊಂಡು ಕೆಲ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಭಾರತೀಯ ಕ್ರಿಕೆಟಿಗರನ್ನು ಸ್ಟುಪೀಡ್, ಬೇಜವಾಬ್ದಾರಿ ಹುಡುಗರು ಎಂದೆಲ್ಲಾ ಟೀಕಿಸಿದ್ದವರೆಲ್ಲಾ ಇದೀಗ ಬಾಯಿಯ ಮೇಲೆ ಕೈಯಿಟ್ಟುಕೊಳ್ಳುವಂತೆ ಭಾರತೀಯ ಆಟಗಾರರು ಮಾಡಿದ್ದಾರೆ.
ಹೌದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರೇಟ್ ಜೆಫ್ರಿ ಭಾರತೀಯ ಆಟಗಾರರು ಬೇಜವಾಬ್ದಾರಿ ಹುಡುಗರು, ಸ್ಟುಪೀಡ್ ಗಳು ಎಂದೆಲ್ಲಾ ಟೀಕಿಸಿದ್ದರು. ಇಂಗ್ಲೆಂಡ್ ವೇಗಿಗಳ ಬೌಲಿಂಗ್ ಅನ್ನು ಎದುರಿಸಲು ಭಾರತೀಯ ಸ್ಟಾರ್ ಬ್ಯಾಟ್ಸ್ ಮನ್ ಗಳು ತಿಣುಕಾಡುತ್ತಿದ್ದಾರೆ ಎಂದೆಲ್ಲಾ ಗೇಲಿ ಮಾಡಿದ್ದರು.
ಇಂಗ್ಲೆಂಡ್ ನ ಮತ್ತೋಬ್ಬ ಮಾಜಿ ಆಟಗಾರ ಸಹ ಭಾರತೀಯ ಆಟಗಾರರು ಬಚ್ಚಾಗಳು. ಅವರು ಇಂಗ್ಲೆಂಡ್ ನ ಪುರುಷರ ಮುಂದೆ ಹುಡುಗರ ರೀತಿ ಆಡುತ್ತಾರೆ ಎಂದೆಲ್ಲಾ ಟೀಕಿಸಿದ್ದು ಇದೀಗ ಭಾರತೀಯ ಆಟಗಾರರು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲುವಿಗೆ ಬೇಕಿರುವುದು ಒಂದೇ ಒಂದು ವಿಕೆಟ್. ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲೂ ಸೋಲು ಕಂಡಿದ್ದ ಟೀಂ ಇಂಡಿಯಾವನ್ನು ಹಲವರು ಟೀಕಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಸನಿಹದಲ್ಲಿದ್ದು ಟೀಕಾಕಾರರ ಬಾಯಿ ಮುಚ್ಚಿಸಿದ್ದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ