ಅದೃಷ್ಟ ಪರೀಕ್ಷೆ ಗುರಿಯೊಂದಿಗೆ ಬಿ- ಟೌನ್ ಗೆ ವೇದಿಕಾ ಎಂಟ್ರಿ

ಶಿವಲಿಂಗ ಖ್ಯಾತಿಯ ನಟಿ ವೇದಿಕಾ ಅವರ ಮುಂದಿನ    ‘ಹೋಮ್ ಮಿನಿಸ್ಟರ್ ‘  ಸಿನಿಮಾದ ಕೊನೆಯ ಬಿಟ್ ನ್ನು ಬೆಂಗಳೂರಿನಲ್ಲಿ  ಪೂರ್ಣಗೊಳಿಸಿದ್ದು, ಅದೃಷ್ಟ ಪರೀಕ್ಷೆ ಗುರಿಯೊಂದಿಗೆ ಬಾಲಿವುಡ್  ಗೆ ಎಂಟ್ರಿ ನೀಡಿದ್ದಾರೆ.
ಇಮ್ರಾನ್ ಹಸ್ಮಿ ಜೊತೆಗೆ ತಾತ್ಕಾಲಿಕ ಶೀರ್ಷಿಕೆಯೊಂದರ ಸಿನಿಮಾನದಲ್ಲಿ ಅಭಿನಯಿಸಿರುವ ವೇದಿಕಾ   ಸಿನಿಮಾಗಳು  ನನ್ನನ್ನು ಓಡುವಂತೆ ಮಾಡಿದ್ದು, ಜೀವಂತವಾಗಿ ಇಟ್ಟಿವೆ  ಹೇಳುತ್ತಾರೆ.
ವೇದಿಕಾ ಮುಂದಿನ ಕನ್ನಡ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವಾಗಲೇ  ತಮಿಳಿನ  ಬಿಲಿಂಗಲ್  ಮತ್ತು ತೆಲುಗಿನ  ಕಾಂಚನಾ 3  ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.  ಮಲಯಾಳಂ ಚಿತ್ರದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಆದರೆ. ಆದರೆ ಈಗ ಅವಳು  ಬಾಲಿವುಡ್ ನಲ್ಲಿ ಇಮ್ರಾನ್ ಹಸ್ಮಿ ಜೊತೆಗೆ ನಟಿಸುತ್ತಿದ್ದು, ಅದೃಷ್ಟ ಪರೀಕ್ಷೆ ನಡೆಸಲು ಸಿದ್ದಗೊಂಡಿದ್ದಾರೆ.
ಎಲ್ಲಾ ಕಲಾವಿದರ ಬದುಕಿನಲ್ಲಿಯೂ ದೊಡ್ಡದಾದ ಹಾಗೂ ಉತ್ತಮವಾದ ಸಂದರ್ಭ ಬಂದೇ ಬರುತ್ತಿದೆ. ಆದೇ ರೀತಿಯಲ್ಲಿ ತನ್ನಗೂ ಬಾಲಿವುಡ್ ನಲ್ಲಿ ಅಭಿನಯಿಸುವ ಅವಕಾಶ ದೊರೆತಿದೆ.ಯೋಚಿಸಿ ಬಾಲಿವುಡ್ ಗೆ ಎಂಟ್ರಿ ನೀಡಿದ್ದೇನೆ.   ಚಿತ್ರಕ್ಕೆ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದ್ದು, ಮಾರಿಷಸ್ ನಲ್ಲಿ ಚಿತ್ರೀಕರಿಸಲಾಗಿದ್ದು,  ಚಿತ್ರದ ಚಿತ್ರೀಕರಣವು ಪೂರ್ಣಗೊಂಡಿದೆ, “ಎಂದು ಅವರು ಹೇಳುತ್ತಾರೆ.
ಇಮ್ರಾನ್ ಹಸ್ಮಿ ಜೊತೆಗೆ ಅಭಿನಯಿಸಿದದ್ದು ಅಸಾಧಾರಣ ಅನುಭವ ಎಂದು ವೇದಿಕಾ ತನ್ನ ಅನುಭವವನ್ನು ಹಂಚಿಕೊಂಡರು. ಬಾಲಿವುಡ್ ನಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಿದ್ದು, ಈಗ ಉತ್ತರ ಭಾಗದಲ್ಲೂ ವೀಕ್ಷಕರನ್ನು ಸಂಪರ್ಕಿಸುವಂತಾಗಿದೆ ಎಂದು ಹೇಳಿದರು.ನನ್ನ ಕನಸಿನ ಬಗ್ಗೆ ತಾಯಿಯಲ್ಲಿ ನಂಬಿಕೆ ಇದ್ದು, ಆಕೆಯ ನನ್ನ ಹಿಂದಿನ ಪ್ರೇರಣ ಶಕ್ತಿಯಾಗಿದ್ದಾರೆ ಎಂದು ವೇದಿಕಾ ತನ್ನ ತಾಯಿಯ  ಪ್ರೂತ್ಸಾಹ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ