ಪಾಕ್ 22ನೇ ಪ್ರಧಾನಿಯಾಗಿ ಇಮ್ರಾನ್ ಖಾನ್ ಪದಗ್ರಹಣ

ಇಸ್ಲಾಮಾಬಾದ್:ಆ-18: ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಸಂಸ್ಥಾಪಕ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜಧಾನಿ ಇಸ್ಲಾಮಾಬಾದ್ ನಲ್ಲಿರುವ ಅಧ್ಯಕ್ಷರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯ ಮೂಲಕ ಸಮಾರಂಭವನ್ನು ಆರಂಭವಾಯಿತು. ಬಳಿಕ ಖುರಾನ್​ನ ಸಂದೇಶಗಳನ್ನು ಪಠಿಸಲಾಯಿತು. ನಂತರ ಪಾಕಿಸ್ತಾನದ ಅಧ್ಯಕ್ಷ ಮಮೂನ್​ ಹುಸೈನ್​ ಅವರು ಇಮ್ರಾನ್​ ಖಾನ್​ ಅವರಿಗೆ ಪ್ರಮಾಣವ ವಚನ ಬೋಧಿಸಿದರು. ಈ ಮೂಲಕ ಇಮ್ರಾನ್ ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ನವಜೋತ್ ಸಿಂಗ್ ಸಿಧು ಅವರನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥರಾದ ಜನರಲ್ ಖಮರ್ ಜಾವೆದ್ ಬಜ್ವಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಸಿಧು ಅವರನ್ನು ಆಲಂಗಿಸಿಕೊಂಡು ಬಜ್ವಾ ಸ್ವಾಗತ ಕೋರಿದರು.

ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ಬುಶ್ರಾ ಮನೇಕಾ ಅವರು ಕೂಡ ಆಗಮಿಸಿದ್ದರು. ತಮ್ಮ ಮಾಜಿ ಪತಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ಬುಶ್ರಾ ಸುದ್ದಿಗೆ ಗ್ರಾಸವಾಗಿದ್ದರು.

ದೇಶ ವಿದೇಶದ ಗಣ್ಯರು, ಹಂಗಾಮಿ ಪ್ರಧಾನಿ ಸಾಸಿರ್​ ಉಲ್​ ಮುಲ್ಕ, ಸ್ಪೀಕರ್​ ಅಸಾದ್​ ಖೈಸರ್​, ಸೇನಾ ಮುಖ್ಯಸ್ಥ ಖಮರ್​ ಜಾವೇದ್​ ಬಾಜ್ವಾ, ವಾಯುಸೇನೆ ಮುಖ್ಯಮಸ್ಥ ಮುಜಾಹಿದ್​ ಅನ್ವರ್​ ಖಾನ್​ ಮತ್ತು ನೌಕ ಪಡೆಯ ಮುಖ್ಯಸ್ಥ ಜಾಫರ್​ ಮಹಮದ್​ ಅಬ್ಬಾಸಿ, ಕ್ರಿಕೆಟ್​ ರಂಗದ ಒಡನಾಡಿಗಳೂ ಸೇರಿದಂತೆ ಹಲವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇತ್ತೀಚೆಗಷ್ಟೇ ಪಾಕಿಸ್ತಾನದ ಸಂಸತ್​ಗೆ ನಡೆದ 25ನೇ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್​ ಖಾನ್​ ಅವರ ಪಿಟಿಐ 116 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ದೇಶದ ಮೀಸಲು ಕ್ಷೇತ್ರಗಳ ಫಲಿತಾಂಶವನ್ನು ಅಲ್ಲಿನ ಚುನಾವಣೆ ಆಯೋಗ ಪ್ರಕಟಿಸಿದ ನಂತರ ಅವರ ಪಿಟಿಐನ ಗಳಿಗೆ 158ಕ್ಕೆ ಏರಿತ್ತು.

pakistan, imran khan, oath

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ