ನಗ್ನ ಫೋಟೋ ವೈರಲ್ ಮಾಡಿದ ಮಾಡೆಲ್ಗೆ 10 ತಿಂಗಳು ಜೈಲು!

ಹೊಸದಿಲ್ಲಿ: ಮಾಡೆಲ್ ಒಬ್ಬನ ನಗ್ನ ಫೋಟೋವನ್ನು ಕ್ಲಿಕ್ಕಿಸಿ, ವೈರಲ್ ಮಾಡಿದ್ದ ಕಾರಣ ದಕ್ಷಿಣ ಕೊರಿಯಾದ ಕೋರ್ಟ್ ಮಾಡಲ್ ಒಬ್ಬಳಿಗೆ 10 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಅಹನ್, ಜೈಲು ಶಿಕ್ಷೆಗೆ ಗುರಿಯಾಗಿರೋ ರೂಪದರ್ಶಿ. ಈಕೆಗೆ ಕೋರ್ಟ್ 10 ತಿಂಗಳ ಜೈಲು ಶಿಕ್ಷೆಯ ಜೊತೆಗೆ 40 ಗಂಟೆಗಳ ಕೌನ್ಸೆಲಿಂಗ್ ಶಿಕ್ಷೆಯನ್ನು ವಿಧಿಸಿದೆ. ಅಹನ್ ವೃತ್ತಿಯಲ್ಲಿ ಮಾಡೆಲ್ ಆಗಿದ್ದು, ಈಕೆ ಪುರುಷ ಮಾಡೆಲ್ ಒಬ್ಬನ ನಗ್ನ ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾಳೆ. ಆ ಫೋಟೋಗೆ ಅನೇಕರು ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡಿದ್ದರು. ಇದನ್ನು ನೋಡಿದ ಮಾಡೆಲ್, ಅಹನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಡೆಲ್ ನೀಡಿದ ದೂರಿನ ಅನ್ವಯ ಆಕೆಯನ್ನು ಬಂಧಿಸಲಾಗಿದೆ. ನಾವು ಆಕೆಯ ಮನೆ ಮೇಲೆ ದಾಳಿ ನಡೆಸಿ ಕೆಲವು ಸಾಕ್ಷ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದೇವೆ. ಬಳಿಕ ಆಕೆಯನ್ನು ನ್ಯಾಯಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ 10 ತಿಂಗಳು ಜೈಲು ಶಿಕ್ಷೆ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ಸ್ಪೈ ಕ್ಯಾಮೆರಾ ಬಳಸಿ ಅಶ್ಲೀಲ ವಿಡಿಯೋ ಕ್ಲಿಕ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಶಾಲೆ, ಟ್ರೈನ್, ಕಚೇರಿ, ಡ್ರೆಸ್ಸಿಂಗ್ ರೂಮ್ ಮತ್ತು ರಸ್ತೆಯಲ್ಲೂ ವಿಡಿಯೋಗಳನ್ನು ಮಾಡಲಾಗುತ್ತಿದೆ.
2010 ರಲ್ಲಿ ದಕ್ಷಿಣಾ ಕೊರಿಯಾದಲ್ಲಿ ಸ್ಪೈ ಕ್ಯಾಮೆರಾದ ಮೂಲಕ ಸುಮಾರು 1,100 ಕ್ಕೂ ಹೆಚ್ಚು ವಿಡಿಯೋ ರೆಕಾರ್ಡ್ ಮಾಡಲಾಗಿತ್ತು. ಆದರೆ ಇತ್ತೀಚೆಗೆ 6,500 ಕ್ಕೂ ಹೆಚ್ಚು ವಿಡಿಯೋಗಳು ಹೆಚ್ಚಾಗಿವೆ. ಕೆಲವರು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನು ಕೆಲವರು ಆ ಫೋಟೋಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ