ರಾಷ್ಟ್ರಧ್ವಜ ಹಾರಿಸುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ

ನವದೆಹಲಿ:ಆ-14: ಶ್ರೀನಗರದ ಲಾಲ್‌ ಚೌಕದಲ್ಲಿಂದು ಸ್ವಾತಂತ್ರ್ಯದ ಮುನ್ನಾ ದಿನ ತ್ರಿವರ್ಣ ಧ್ವಜವನ್ನು ಹಾರಿಸಲು ಮುಂದಾದ ವ್ಯಕ್ತಿಯನ್ನು ಸ್ಥಳೀಯರು ಹೊಡೆದು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ದೇಶಾದ್ಯಂತ 72ನೇ ಸ್ವಾತಂತ್ರ್ಯದಿನವನ್ನು ಆಚರಿಸಲು ಸಜ್ಜಾಗುತ್ತಿರುವ ಹಿನ್ನಲೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆದಿರುವ ಈ ಘಟನೆ ಆತಂಕಕ್ಕೆ ಕಾರಣವಾಗಿದೆ.

ಹಲ್ಲೆ ನಡೆಯುತ್ತಿದ್ದುದನ್ನು ಕಂಡ ಸಿಆರ್‌ಪಿಎಫ್ ಭದ್ರತಾ ಸಿಬಂದಿಗಳು ಧಾವಿಸಿ ಬಂದು ಹಲ್ಲೆಗೊಳಗಾಗಿದ್ದ ವ್ಯಕ್ತಿಯನ್ನು ಪಾರು ಮಾಡಿದ್ದಾರೆ.

ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು ಅಪರಾಧಿಗಳನ್ನು ಹಿಡಿದು ಶಿಕ್ಷಿಸುವುದಾಗಿ ಹೇಳಿದ್ದಾರೆ.

Locals thrash man in Srinagar for unfurling Indian flag

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ