ಟೀಂ ಇಂಡಿಯಾ ತಂಡದ ಊಟದ ಮೆನುವಿನಲ್ಲಿ ಗೋಮಾಂಸ, ಅಭಿಮಾನಿಗಳಿಂದ ಆಕ್ರೋಶ!

ಲಂಡನ್: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಇನ್ನು ಲಾರ್ಡ್ಸ್ ಟೆಸ್ಟ್ ನಲ್ಲಿ ಟೀಂ ಇಂಡಿಯಾಗೆ ನೀಡಿರುವ ಊಟದ ಮೆನುವಿನಲ್ಲಿ ಗೋಮಾಂಸವನ್ನು ಪಟ್ಟಿ ಮಾಡಿರುವುದಕ್ಕೆ ನೇಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಭೋಜನ ವಿರಾಮಕ್ಕೆ ಇರುವ ಆಹಾರಗಳ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂಕ್ರಣ ಮಂಡಳಿ(ಬಿಸಿಸಿಐ) ತನ್ನ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿತ್ತು. ಇದರಲ್ಲಿ ಬ್ರೇಸ್ಡ್ ಬೀಫ್ ಪಾಸ್ತಾ ಆಹಾರವನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಟೀಂ ಇಂಡಿಯಾದ ಆಟಗಾರರ ಭೋಜನಕ್ಕೆ ಗೋಮಾಂಸದ ಆಹಾರವನ್ನು ಆಯ್ಕೆ ನೀಡಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಟೆಸ್ಟ್ ಪಂದ್ಯದ ವೇಳೆ ಎರಡೂ ತಂಡಗಳ ಆಟಗಾರರಿಗೆ ಒಂದೇ ರೀತಿಯ ಆಹಾರವನ್ನು ನೀಡಲಾಗುತ್ತದೆ. ಯಾವ ಆಹಾರವನ್ನು ತಿನ್ನಬೇಕು ಎನ್ನುವುದು ಆಟಗಾರರ ವೈಯಕ್ತಿಕ ಆಯ್ಕೆ ಆಗಿರುತ್ತದೆ. ಕೇವಲ ಭಾರತ ತಂಡಕ್ಕೆ ಮಾತ್ರ ನೀಡಿರುವ ಆಹಾರ ಇದಲ್ಲ. ಇಂಗ್ಲೆಂಡ್ ಆಟಗಾರರು ಬೀಫ್ ತಿನ್ನುತ್ತಾರೆ ಎಂಬುದು ಇಲ್ಲಿ ಮುಖ್ಯ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ