ಲಾರ್ಡ್ಸ್ ಅಂಗಳದಲ್ಲಿ  ಗ್ರೌಂಡ್ಸ್​ ಮನ್ ಆದ  ಅರ್ಜುನ್ ತೆಂಡೂಲ್ಕರ್

ಲಂಡನ್ :  ಕ್ರಿಕೆಟ್  ಕಾಶಿ  ಲಾರ್ಡ್ಸ್ ಅಂಗಳದಲ್ಲಿ  ನಡೆಯುತ್ತಿರುವ  ಟೀಂ ಇಂಡಿಯಾ  ಮತ್ತು   ಇಂಗ್ಲೆಂಡ್ ನಡುವಿನ  ಎರಡನೇ  ಟೆಸ್ಟ್  ಪಂದ್ಯದಲ್ಲಿ  ಸವ್ಯ ಸಚಿನ್​  ತೆಂಡೂಲ್ಕರ್  ಅವರ ಪುತ್ರ  ಅರ್ಜುನ್  ತೆಂಡೂಲ್ಕರ್ ಸಖತ್ ಸೌಂಡ್  ಮಾಡಿದ್ದಾರೆ.  ಮೊನ್ನೆಯಷ್ಟೆ  ಇಂಗ್ಲೆಂಡ್ ಆಟಗಾರ್ತಿ ಜೊತೆ  ಡಿನ್ನರ್  ಪಾರ್ಟಿ ಮಾಡಿ  ಸದ್ದು  ಮಾಡಿದ್ದ  ಅರ್ಜುನ್  ಇದೀಗ  ಗ್ರೌಂಡ್ಸ್​ ಮನ್​  ಆಗಿ  ಮತ್ತೆ  ಸುದ್ದಿಯಲ್ಲಿದ್ದಾರೆ.

ಸದ್ಯ  ಆಂಗ್ಲರ ವಿರುದ್ಧ  ಲಾರ್ಡ್ಸ್  ಅಂಗಳದಲ್ಲಿ  ನಡೆಯುತ್ತಿರುವ  ಎರಡನೇ  ಟೆಸ್ಟ್  ಟೆಸ್ಟ್  ನಡೆಯುತ್ತಿರುವ  ಹಿನ್ನೆಲಯಲ್ಲಿ  ಟೀಂ ಇಂಡಿಯಾ  ಬ್ಯಾಟ್​ ಮನ್​ಗಳಿಗೆ  ಅಜು್ನ್   ನೆಟ್ಸ್​ ನಲ್ಲಿ  ಬೌಲಿಂಗ್ ಮಾಡುತ್ತಿದ್ದಾರೆ.  ಟೀಂ ಇಂಡಿಯಾ  ಇಂಡಿಯಾ  ಕ್ಯಾಂಪ್​ನಲ್ಲಿರುವ ಅರ್ಜುನ್  ನಿನ್ನೆ  ಎರಡನೇ  ದಿನದಾಟದ  ಪಂದ್ಯ  ನಡೆಯುವ ವೇಳೆ  ಮಳೆ  ಬಂದಾಗ  ಅರ್ಜುನ್   ತೆಂಡೂಲ್ಕರ್  ಇಲ್ಲಿನ  ಪಿಚ್  ಸಿದ್ದಪಡಿಸುವ ಗ್ರೌಂಡ್ಸ್​ ಮನ್​ಗಳಿಗೆ  ಮಳೆಯಿಂದ  ಒದ್ದೆಯಾಗಿದ್ದ  ಕ್ರೀಡಾಂಗಣವನ್ನ  ತಯಾರು  ಮಾಡಲು  ನೆರವಾಗಿ  ಎಲ್ಲರ  ಗಮನ  ಸೆಳೆದಿದ್ದಾರೆ.  ಲಾರ್ಡ್ಸ ಕ್ರಿಕೆಟ್​ ಗ್ರೌಂಡ್  ತನ್ನ  ಸೋಶಿಯಲ್  ಮೀಡಿಯಾದಲ್ಲಿ  ಹಾಕಿಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ