ಏರ್ ಶೋವನ್ನು ಲಖ್ನೌ ಗೆ ಶಿಫ್ಟ್ ಮಾಡಿರುವುದರ ಹಿಂದೆ ಲೋಕಸಭಾ ಚುನಾವಣಾ ಉದ್ದೇಶ: ಸಿಎಂ ಕಿಡಿ

ಹುಬ್ಬಳ್ಳಿ:ಆ-12: ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಏರ್ ಶೋವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉತ್ತರ ಪ್ರದೇಶದ ಲಖನೌ ಗೆ ಸ್ಥಳಾಂತರ ಮಾಡಿದೆ. ಈ ನಡೆ ಸರಿಯಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನದೆಸಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಆದ ಮೇಲೆ ಮೊದಲ ಬಾರಿಗೆ ಬಂದಿದ್ದೇನೆ. ನ್ಯಾಯಾಲಯದ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದೇನೆ.‌ ಸ್ಥಳೀಯ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ನಾನು ಇಲ್ಲಿ ಇರುವುದು ಆಗುವುದಿಲ್ಲ. ಇಲ್ಲವಾದಲ್ಲಿ ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಪ್ರವಾಸ ಇಟ್ಟುಕೊಂಡಿದ್ದೆ. ಸ್ಥಳೀಯ ಚುನಾವಣೆ ಮುಗಿದ ನಂತರ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ ಎಂದರು.

ಏರ್‌ಶೋವನ್ನು ಲಖನೌ ಸ್ವಿಫ್ಟ್ ಮಾಡಿದ್ದು ಸರಿಯಲ್ಲ. ಲೋಕಸಭಾ ಚುನಾವಣೆಯನ್ನ ದೃಷ್ಟಿಯಲ್ಲಿ ಇಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲಿ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳಿವೆ ಆ ಉದ್ದೇಶದಿಂದ ಲಖನೌ ಸ್ಥಳಾಂತರ ಮಾಡಲಾಗಿದೆ ಎಂದು ಗುಡುಗಿದರು.

ಬೆಂಗಳೂರು ಏರ್ ಶೋ ನಡೆಸಲು ಅತ್ಯಂತ ಸುಸಜ್ಜಿತ ನಗರವಾಗಿತ್ತು. ಆದ್ರೆ, ಇದನ್ನ ಕಡೆಗಣೆಸಿದ್ದು ನನಗೆ ಈಗ ಬೆಳಕಿಗೆ ಬಂದಿದೆ ಎಂದರು.

ಕೆ ಶಿಫ್ ಕಛೇರಿಯನ್ನ ಹಾಸನಕ್ಕೆ ಸ್ಥಳಾಂತರ ವಿಚಾರಕ್ಕೆ‌ ಪ್ರತಿಕ್ರಯಿಸಿದ ಅವರು, ಅದು ಆಯಾ ಇಲಾಖೆಗೆ ಬಿಟ್ಟಿದ್ದು ಎನ್ನುವ ಮೂಲಕ ಸಹೋದರ ರೇವಣ್ಣ ಅವರ ನಿರ್ಧಾರಕ್ಕೆ ಪ್ರತಿಕ್ರಯಿಸಲು ಹಿಂದೆಟು‌ ಹಾಕಿದರು.

CM H D Kumaraswamy,hubli,Air Show Shift

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ