ಕೃಷಿ ಭೂಮಿ ಖರೀದಿಗೆ ಆದಾಯ ಮಿತಿ ರದ್ದುಗೊಳಿಸಿದರೆ ರೈತರಿಂದ ಪ್ರತಿರೋಧದ ಎಚ್ಚರಿಕೆ

 

ಬೆಂಗಳೂರು, ಆ.11- ಕೃಷಿ ಭೂಮಿ ಖರೀದಿಗೆ ಆದಾಯ ಮಿತಿ ರದ್ದುಗೊಳಿಸಲು ಸರ್ಕಾರ ಮುಂದಾದರೆ ರೈತರಿಂದ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಭೂ ಸುಧಾರಣಾ ಕಾಯ್ದೆ 1974ರಲ್ಲಿ ಜಾರಿಗೆಬಂದ ಕರ್ನಾಟಕ ಭೂ ಸುಧಾರಣೆ ಕಾಯ್ದೆ 61ರ ಪ್ರಕಾರ ರಾಜ್ಯದಲ್ಲಿ ಕೃಷಿಕರಲ್ಲದವರು. ಕೃಷಿ ಭೂಮಿ ಖರೀದಿಸಬೇಕಾದರೆ 12 ಸಾವಿರ ಆದಾಯ ಮೀರುವಂತಿರಲಿಲ್ಲ. 1991ರಲ್ಲಿ ಕಾಯ್ದೆ ತಿದ್ದುಪಡಿ ತಂದು ಆದಾಯ ಮಿತಿಯನ್ನು 50ಸಾವಿರಕ್ಕೆ ಹೆಚ್ಚಿಸಲಾಯಿತು. ಬಳಿಕ 1995ರಲ್ಲಿ ದೇವೇಗೌಡರ ಕಾಲದಲ್ಲಿ ಅದಕ್ಕೆ ತಿದ್ದುಪಡಿ ತಂದು ಆದಾಯ ಮಿತಿಯನ್ನು 2 ಲಕ್ಷಕ್ಕೆ ಏರಿಸಲಾಗಿತ್ತು.

ನಂತರ 2015ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಆದಾಯ ಮಿತಿಯನ್ನು 25 ಲಕ್ಷಕ್ಕೆ ಏರಿಸಿದರು. ಆದರೆ, ಈಗಿನ ಸರ್ಕಾರ ಆದಾಯ ಮಿತಿಯನ್ನು ರದ್ದುಗೊಳಿಸುವುದಕ್ಕೆ ಮುಂದಾಗಿದೆ. ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗಲಿದೆ ಎಂದರು.
ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಕೃಷಿ ಭೂಮಿ ಖರೀದಿಗೆ ಸಂಬಂಧಿಸಿದಂತೆ ಕಾಪೆರ್Çರೇಟ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆದಾಯ ಮಿತಿ ರದ್ದುಗೊಳಿಸಿದರೆ ಲಕ್ಷಾಂತರ ರೈತರಿಗೆ ಅನ್ಯಾಯವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಉದ್ಯೋಗ ಸೃಷ್ಟಿ ಮಾಡಲು ಮತ್ತು ವಿದ್ಯಾವಂತರು ಕೃಷಿ ಮಾಡಲು ಅನುಕೂಲ ಮಾಡುವ ಉದ್ದೇಶದಿಂದ ತಿದ್ದುಪಡಿ ಮಾಡುವ ಆಲೋಚನೆ ಇದೆ ಎಂದು ಹೇಳುತ್ತಿದೆ. ಆದರೆ, ಭೂಮಿಯನ್ನು ಕಾಪೆರ್Çರೇಟ್ ವಲಯಕ್ಕೆ ಕೊಟ್ಟರೆ ಒಂದು ಸಾವಿರ ಜನಕ್ಕೆ ಉದ್ಯೋಗ ಕೊಡಬಹುದು. ಆದರೆ, ಭೂಮಿ ಮಾರಾಟ ಮಾಡಿದ ರೈತನಿಗೆ ಬೇರೆ ಉದ್ಯೋಗದಲ್ಲಿ ಅನುಭವವಿಲ್ಲದೆ ಮಾರಾಟ ಮಾಡಿದ ಸಂಪೂರ್ಣ ಹಣವನ್ನು ಕಳೆದುಕೊಂಡು ನಿರಾಶ್ರಿತರಾಗುತ್ತಾರೆ ಎಂದು ವಿವರಿಸಿದರು.

ಸರ್ಕಾರ ಆದಾಯ ಮಿತಿಯನ್ನು ರದ್ದುಗೊಳಿಸಬಾರದು. ಆದಾಯ ಮಿತಿಯನ್ನು ಸಂಪೂರ್ಣ ರದ್ದುಗೊಳಿಸುವ ಮೂಲಕ ಬಂಡವಾಳಶಾಹಿಗಳಿಗೆ ಕಾಪೆರ್Çರೇಟ್ ಕಂಪೆನಿಗಳಿಗೆ ಕೃಷಿ ಭೂಮಿಯನ್ನು ಧಾರೆ ಎರೆಯಲು ಸರ್ಕಾರ ಪೆÇ್ರೀ ತೋರಬಾರದು. ಈಗಾಗಲೇ ಭ್ರಷ್ಟರು ಬೇರೆ ಬೇರೆ ಹೆಸರಿನಲ್ಲಿ ಕೋಟಿಗಟ್ಟಲೆ ಆಸ್ತಿ ಮಾಡಿದ್ದಾರೆ. ಇದಕ್ಕೆ ಅವಕಾಶ ಕೊಡದಂತೆ ಮನವಿ ಮಾಡಿದರು.
ರಾಜ್ಯ ಕಾರ್ಯದರ್ಶಿ ಅಂಬ್ಬಣಿ ಶಿವಪ್ಪ, ರೈತ ಮುಖಂಡ ನಾಗರಾಜು, ಕೋಲಾರ ಜಿಲ್ಲಾಧ್ಯಕ್ಷ ವೀರಭದ್ರಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ