ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ದಲೈ ಲಾಮಾ

ಬೆಂಗಳೂರು:ಆ-10: ಭಾರತದ ಮೊದಲ ಪ್ರಧಾನಿ ಮಹಮದ್​ ಅಲಿ ಜಿನ್ನಾ ಆಗಬೇಕು ಎಂಬುದು ಗಾಂಧೀಜಿಯವರ ಇಚ್ಛೆಯಾಗಿತ್ತು ಎಂಬ ಹೇಳಿಕೆ ನೀಡುವ ಮೂಲಕ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಟಿಬೆಟಿಯನ್ ಧರ್ಮಗುರು ದಲೈ ಲಾಮಾ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಕೇಂದ್ರೀಯ ಟಿಬೆಟಿಯನ್​ ಆಡಳಿತದ ವತಿಯಿಂದ ಬೆಂಗಳೂರಿನ ತಾಜ್​ ವೆಸ್ಟ್​ ಎಂಡ್​ ಹೊಟೇಲ್​ನಲ್ಲಿ ನಡೆದ ‘ಧರ್ಮಚಕ್ರ’ ಗೌರವ ಸಮರ್ಪಣಾ ಸಮಾರಂಭ ‘Thank you Karnataka’ದ ನಂತರ ಮಾತನಾಡಿದ ದಲೈ ಲಾಮಾ, ನನ್ನ ಹೇಳಿಕೆ ವಿವಾದ ಸೃಷ್ಟಿಸಿದೆ. ನಾನೇದರೂ ತಪ್ಪಾಗಿ ಹೇಳಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಮಹಾತ್ಮ ಗಾಂಧಿಜಿಯವರು ಜಿನ್ನಾ ಅವರಿಗೆ ಪ್ರಧಾನಮಂತ್ರಿಗಿರಿ ನೀಡಲು ಇಚ್ಛೆ ಹೊಂದಿದ್ದರು. ಆದರೆ, ಪಂಡಿತ್​ ನೆಹರು ಅದನ್ನು ನಿರಾಕರಿಸಿದ್ದರು. ಭಾರತದ ಮೊದಲ ಪ್ರಧಾನಿ ಮಹಮದ್​ ಅಲಿ ಜಿನ್ನಾ ಆಗಬೇಕು ಎಂಬುದು ಗಾಂಧೀಜಿಯವರ ಇಚ್ಛೆಯಾಗಿತ್ತು. ಆದರೆ, ಜವಾಹಾರ್​ ಲಾಲ್​ ನೆಹರು ಅದನ್ನು ನಿರಾಕರಿಸಿದ್ದಲ್ಲದೆ ತಾವೇ ಪ್ರಧಾನಿ ಹುದ್ದೆಗೇರಿದರು. ನೆಹರೂ ತಮ್ಮ ಬಗ್ಗೆ ಮಾತ್ರ ಯೋಚಿಸುವ ವ್ಯಕ್ತಿಯಾಗಿದ್ದರು ಎಂದು ದಲೈ ಲಾಮಾ ಈ ಹಿಂದೆ ಹೇಳಿಕೆ ನೀಡಿದ್ದರು.

ಒಂದುವೇಳೆ ಗಾಂಧೀಜಿಯವರ ಇಚ್ಛೆಯಂತೆ ಮಹಮದ್​ ಅಲಿ ಜಿನ್ನಾ ಅವರೇ ಪ್ರಧಾನಿಯಾಗಿದ್ದರೆ ಭಾರತ ಯಾವ ಕಾರಣಕ್ಕೂ ವಿಭಜನೆಯಾಗುತ್ತಿರಲಿಲ್ಲ. ಆದರೆ ಅವರ ಆಸೆ ಕೈಗೂಡಲಿಲ್ಲ ಎಂದು ಗೋವಾದಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದ್ದರು. ದಲೈಲಾಮಾ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

Dalai Lama,Statement,apology,Mahatma Gandhi,Jinnah,Pandit Nehru

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ