36 ವರ್ಷಗಳ ಬಳಿಕ ಪಾಕಿಸ್ತಾನದಿಂದ ಬಿಡುಗಡೆಯಾಗಿ ಕುಟುಂಬ ಸೇರುತ್ತಿದೆ ಜೀವ

ಜೈಪುರ:ಆ-೧೦: ಬರೋಬ್ಬರಿ 36 ವರ್ಷಗಳಿಂದ ಕಣ್ಮರೆಯಾಗಿದ್ದ ವ್ಯಕ್ತಿಯೊಬ್ಬರು ಈಗ ತನ್ನ ಕುಟುಂಬವನ್ನು ಮತ್ತೆ ಸೇರುತ್ತಿದ್ದಾರೆ. ಇಂತಹವೊಂದು ಸಂಭ್ರಮಕ್ಕೆ ಜೈಪುರದ ಕುಟುಂಬವೊಂದು ಸಾಕ್ಷಿಯಾಗಲಿದೆ.

ಜೈಪುರದಲ್ಲಿ ಕೂಲಿಕಾರನಾಗಿ ಕೆಲಸ ಮಾಡುತ್ತಿದ್ದ ಗಜೇಂದ್ರ ಶರ್ಮಾ 1982ರಲ್ಲಿ ಇದ್ದಕ್ಕಿದ್ದಂತೆ ಕಾಣದಾಗಿದ್ದರು. ಆಗ ಆತನಿಗೆ 40ರ ಪ್ರಾಯ. ನಾಪತ್ತೆಯಾಗಿದ್ದ ಗಜೇಂದ್ರ ಈ ವರೆಗೆ ಪಾಕಿಸ್ತಾನದ ಜೈಲಿನಲ್ಲಿದ್ದರು. ಇವರಿಗಾಗಿ ಶೋಧ ನಡೆಸುತ್ತಿದ್ದ ಕುಟುಂಬಕ್ಕೆ ಸುಳಿವು ಸಿಕ್ಕಿದ್ದು ಕಳೆದ ಮೇ ತಿಂಗಳಲ್ಲಿ.

ಕಳೆದ ಮೇ ತಿಂಗಳಲ್ಲಿ ಆತ ಲಾಹೋರಿನ ಲಖ್ಪತ್ ಜೈಲಿನಲ್ಲಿ ಪತ್ತೆಯಾಗಿದ್ದು, ಆಗಸ್ಟ್ 13ಕ್ಕೆ ಬಿಡುಗಡೆಯಾಗುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಕುಟುಂಬದವರಿಗೆ ಸೂಚನೆ ನೀಡಿದೆ.

36 ವರ್ಷಗಳಿಂದ್ ಆತನಿಗೆ ಎರಡು ಗಂಡು ಮಕ್ಕಳಿದ್ದು, ಮತ್ತೀಗ 6 ಜನ ಮೊಮ್ಮಕ್ಕಳು ಸಹ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ತಂದೆ ಗಜೆಂದ್ರ ವಾಪಸ್ಸಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಗ ಮುಖೇಶ್, ನನ್ನ ತಂದೆ ಈ ತಿಂಗಳ 13ಕ್ಕೆ ಬಿಡುಗಡೆಯಾಗುತ್ತಾನೆಂದು ಹೇಳಲಾಗಿದೆ. ಅವರು ಈ ಬಾರಿಯ ಸ್ವಾತಂತ್ರ್ಯೋತ್ಸವ ಆಚರಿಸಲು ದೇಶದಲ್ಲಿರಲಿ ಎಂದು ನಾವು ಪ್ರಾರ್ಥಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಗಜೇಂದ್ರ ಶರ್ಮಾ ಜೈಪುರಕ್ಕೆ ಮರಳುತ್ತಿದ್ದಂತೆ ಕುಟುಂಬ ಹಬ್ಬವನ್ನಾಚರಿಸಲು ನಿರ್ಧರಿಸಿದೆ. ಆದರೆ ಗಜೇಂದ್ರ ಪಾಕ್ ಜೈಲಿನಲ್ಲಿರಲು, ಆತನಬಂಧನಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ.

after 36 years jaipur man to return from pakistan jail

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ