ಮೇ.17ರ ಚಳುವಳಿ ಮುಖ್ಯಸ್ಥ ತಿರುಮುರುಗನ್ ಗಾಂಧಿ ಬಂಧನ

ಬೆಂಗಳೂರು:ಆ-9: ತಮಿಳು ಹೋರಾಟಗಾರ, ಮೇ 17ರ ಚಳುವಳಿ ಮುಖಂಡ ತಿರುಮುರುಗನ್ ಗಾಂಧಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ತಿರುಮುರುಗನ್ ಗಾಂಧಿ, ತಲೆಮರೆಸಿಕೊಂಡಿದ್ದರು. ಇಂದು ಜರ್ಮನಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಬೆಂಗಳೂರಿನ ಏರ್‌ಪೋರ್ಟ್‌ ಪೊಲೀಸರು, ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿದ್ದಾರೆ.

ತಿರುಮುರುಗನ್ ಗಾಂಧಿ ಕುರಿತು ತಮಿಳುನಾಡು ಪೊಲೀಸರು, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಪ್ರತ್ಯೇಕತವಾದಿಯಾಗಿದ್ದ ತಿರುಮುರುಗನ್ ಕುರಿತು ಸೂಕ್ತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ಚೆನ್ನೈ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ನಗರಕ್ಕೆ ಆಗಮಿಸುತ್ತಿದ್ದಾರೆ.

ತಿರುಮುರುಗನ್ 2009ರಲ್ಲಿ ಎಲ್‌ಇಟಿ ಹಾಗೂ ಶ್ರೀಲಂಕಾ ನಡುವಿನ ಘರ್ಷಣೆಯಲ್ಲಿ ತಮಿಳು ಈಲಂ ಬಂಡುಕೋರರ ಪರ ನಿಂತಿದ್ದ. ಈ ವೇಳೆ ನಡೆದ ಘರ್ಷಣೆಯಲ್ಲಿ ತಮಿಳು ಈಲಂನ ಸಾಕಷ್ಟು ಬಂಡುಕೋರರು ಮೃತಪಟ್ಟಿದ್ದರು. ನಂತರ ತಮಿಳು ಈಲಂನ ಬಂಡುಕೋರನನ್ನು ಮುನ್ನಡೆಸುವ ಹೊಣೆಯನ್ನು ಹೊತ್ತಿದ್ದರು. ಈ ವೇಳೆ ಮೇ 17ರ ಚಳವಳಿ ಹುಟ್ಟುಹಾಕಿ ಬಂಡುಕೋರರ ಪರ ನಿಂತಿದ್ದರು. ತಮಿಳುನಾಡಿನಲ್ಲಿ 2017 ರಲ್ಲಿ ತಿರುಮುರುಗನ್ ವಿರುದ್ಧ ಗೂಂಡಾ ಕಾಯ್ದೆ ದಾಖಲಾಗಿತ್ತು. ನಂತರ ಈತನಿಗಾಗಿ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಲಾಗಿತ್ತು.

May 17 Movement leader, Thirumurugan Gandhi,arrest

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ