ಮಾನಸ ಸರೋವರ ಯಾತ್ರೆ: 1,225 ಭಾರತೀಯ ಯಾತ್ರಿಕರ ರಕ್ಷಣೆ

ಕಠ್ಮಂಡು: ಹವಾಮಾನ ವೈಪರೀತ್ಯದಿಂದ ನೇಪಾಳದ ಹಿಲ್ಸಾ ಮತ್ತು ಸಿಮಿಕೋಟ್ನಲ್ಲಿ ಸಿಲುಕಿರುವ ಭಾರತದ 1500 ಮಾನಸ ಸರೋವರ ಯಾತ್ರಿಕರ ರಕ್ಷಣಾ ಕಾರ್ಯಾಚರಣೆಯನ್ನು ನೇಪಾಳದ ಭಾರತೀಯ ರಾಯಭಾರ ಕಚೇರಿ ಕೈಗೊಂಡಿದೆ.
ಈ ಕುರಿತು ಮಾಹಿತಿ ನೀಡಿದ ನೇಪಾಳದ ಭಾರತೀಯ ರಾಯಭಾರ ಕಚೇರಿ, ”ನೇಪಾಳದ ಸಿಮಿಕೋಟ್ ಪ್ರದೇಶದಿಂದ ಸುಮಾರು 1,225 ಭಾರತೀಯ ಯಾತ್ರಿಕರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಹಿಲ್ಸಾದಲ್ಲಿ ಸಿಲುಕಿರುವ ಯಾತ್ರಿಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ,” ಎಂದು ತಿಳಿಸಿದೆ. ಭಾರತದ ಗಡಿಯ ಸಮೀಪದಲ್ಲಿರುವ ಈ ಪಟ್ಟಣಗಳಲ್ಲಿ ಆರೋಗ್ಯ ಸೇವೆ ಸೇರಿದಂತೆ ಸುಧಾರಿತ ಮೂಲಸೌಲಭ್ಯಗಳಿವೆ. ನೇಪಾಳ ಸೇನಾ ಹೆಲಿಕಾಪ್ಟರ್ಗಳು ಹಾಗೂ 74 ಖಾಸಗಿ ಹೆಲಿಕಾಪ್ಟರ್ಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ