ಚೊಕ್ಸಿ-ನೀರವ್ ಗೆ ಕ್ಲೀನ್ ಚಿಟ್ ನೀಡದ ಸೆಬಿ, ತನಿಖೆ ಮುಂದುವರಿಕೆ

ನವದೆಹಲಿ: ದೇಶಭ್ರಷ್ಟ ಉದ್ಯಮಿ ಮೆಹುಲ್ ಚೊಕ್ಸಿಗೆ ಆಂಟಿಗುವಾದ ನಾಗರಿಕತೆ ಪಡೆದು ಅಲ್ಲಿ ಹೂಡಿಕೆ ಮಾಡಲು ನಿಯಂತ್ರಕ ಸೆಬಿ ಯಾವುತ್ತೂ ಕೂಡ ಕ್ಲೀನ್ ಚಿಟ್ ವರದಿ ನೀಡಿರಲಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಮಾರುಕಟ್ಟೆಯಲ್ಲಿ ಹಣದ ವಂಚನೆಗೆ ಸಂಬಂಧಪಟ್ಟಂತೆ ಸೆಬಿ ತನಿಖೆಯನ್ನು ಮುಂದುವರಿಸಿದೆ. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಲಕ್ಷಾಂತರ ಕೋಟಿ ರೂಪಾಯಿ ವಂಚನೆ ಎಸಗಿರುವ ಬಗ್ಗೆ ತನಿಖೆ ನಡೆಯುತ್ತಿದೆ.ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಆಂಟಿಗುವಾದ ನಾಗರಿಕತ್ವ ನೀಡಿರುವ ಬಗ್ಗೆ ಕೂಡ ಸೆಬಿ ನೊಟೀಸ್ ಕಳುಹಿಸಿ ವಿಚಾರಣೆ ನಡೆಸಲು ಮುಂದಾಗಿದೆ. ಕಳೆದ ವಾರ, ಆಂಟಿಗುವಾ ಮಾಧ್ಯಮವೊಂದು ವರದಿ ಮಾಡಿ ಕೆರೆಬಿಯನ್ ದೇಶವಾದ ಆಂಟಿಗುವಾದ ಹೂಡಿಕೆ ಘಟಕದ ನಾಗರಿಕತ್ವವನ್ನು(ಸಿಐಯು) ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ನಾಗರಿಕತ್ವ ನೀಡಿ ಅಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಿತ್ತು. ಇದಕ್ಕೆ ಭಾರತದ ಕಡೆಯಿಂದ ಯಾವುದೇ ಆಕ್ಷೇಪ ಬಂದಿರಲಿಲ್ಲ ಎಂದು ಹೇಳಿತ್ತು.ವರದಿಯಲ್ಲಿ ಹೇಳಿರುವಂತೆ ಸಿಐಯು ಭಾರತದ ಸೆಬಿಯಿಂದ ಪಡೆದುಕೊಂಡ ದಾಖಲೆಗಳ ಪ್ರಕಾರ 2014 ಮತ್ತು 2017ರಲ್ಲಿ ಚೊಕ್ಸಿ ಒಡೆತನದ ಕಾರ್ಪೊರೇಟ್ ಸಂಸ್ಥೆ ವಿರುದ್ಧ ತನಿಖೆ ಕೈಗೊಂಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ