ರಾಜ್ಯಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಹರಿವಂಶ್ ಎನ್ ಡಿಎ ಅಭ್ಯರ್ಥಿ ಸಾಧ್ಯತೆ

ನವದೆಹಲಿ:ಆ-೬:ರಾಜ್ಯಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿ(ಯು) ರಾಜ್ಯಸಭಾ ಸದಸ್ಯ ಹರಿವಂಶ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ರಾಜ್ಯಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಆಗಸ್ಟ್‌ 9ರ ಬೆಳಿಗ್ಗೆ 11ಗಂಟೆಗೆ ಚುನಾವಣೆ ನಡೆಯಲಿದೆ. ಉಪಸಭಾಧ್ಯಕ್ಷ ಅಭ್ಯರ್ಥಿಯನ್ನು ಪರಸ್ಪರ ಸಮ್ಮತಿಯಿಂದ ಆಯ್ಕೆ ಮಾಡುವಂತೆ ರಾಜ್ಯಸಭಾ ಸ್ಪೀಕರ್ ವೆಂಕಯ್ಯ ನಾಯ್ಡು ಅವರು ಸಲಹೆ ನೀಡಿದ್ದರು. ಇದರ ಹೊರತಾಗಿಯೂ, ವಿರೋಧ ಪಕ್ಷಗಳು ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದ್ದು, ಚುನಾವಣೆ ನಡೆಯುವುದು ಬಹುತೇಕ ಖಾತ್ರಿಯಾಗಿದೆ.

ಆಗಸ್ಟ್‌ 8ರ ಮಧ್ಯಾಹ್ನದ ಒಳಗಾಗಿ ನಾಮಪತ್ರ ಸಲ್ಲಿಸಬೇಕು. ರಾಜ್ಯಸಭಾ ಉಪಸಭಾಧ್ಯಕ್ಷರಾಗಿದ್ದ ಪಿ.ಜೆ.ಕುರಿಯನ್‌ ಅವರು ಕಳೆದ ಜುಲೈನಲ್ಲಿ ನಿವೃತ್ತಿಯಾಗಿದ್ದರು. ಈ ಹಿನ್ನಲೆಯಲ್ಲಿ ಚುನಾವಣೆ ನಡೆಯಲಿದೆ.

JDU MP Harivansh will be the candidate of NDA for Rajya sabha Deputy Chairman

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ