ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಫೈನಲ್ ನಲ್ಲಿ ಮುಗ್ಗರಿಸಿದ ಪಿ.ವಿ ಸಿಂಧೂ

ಆ-5: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಕರೊಲಿನಾ ಮರಿನ್‌ ವಿರುದ್ಧ ಭಾರತದ ಪಿ.ವಿ. ಸಿಂಧೂ ಪರಾಭವಗೊಂಡಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ 21-19, 21-10 ನೇರ ಸೆಟ್‍ನಲ್ಲಿ ಮರಿನ್ ಗೆಲುವು ಸಾಧಿಸಿ ಚಿನ್ನ ಗೆದ್ದಿದ್ದು, ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.

ಶನಿವಾರ ಸಂಜೆ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಸಿಂಧು, ಜಪಾನ್‌ನ ಅಕಾನೆ ಯಮಗುಚಿ ಅವರನ್ನು 21–16, 24–22ರಿಂದ ಸೋಲಿಸಿದರೆ, ಕರೊಲಿನಾ ಅವರು ಚೀನಾದ ಹಿ ಬಿಂಗ್‌ಜಿಯಾವೊ ಎದುರು ಗೆದ್ದರು.

ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಅಕಾನೆ, ಮೂರನೇ ಸ್ಥಾನದಲ್ಲಿರುವ ಸಿಂಧು ಎದುರು ಮೊದಲ ಗೇಮ್‌ನಲ್ಲಿ ನೀರಸ ಆಟ ಆಡಿದರು. ಎರಡನೇ ಗೇಮ್‌ನ ಆರಂಭದಲ್ಲಿ ಜಪಾನ್ ಆಟಗಾರ್ತಿ ಮುನ್ನಡೆ ಸಾಧಿಸಿದರೂ ಚೇತರಿಸಿಕೊಂಡ ಸಿಂಧು ಕೊನೆಯಲ್ಲಿ ಜಯ ತಮ್ಮದಾಗಿಸಿಕೊಂಡರು.

ಮೊದಲ ಸೆಮಿಫೈನಲ್‌ನ ಆರಂಭದಲ್ಲಿ ಕರೊಲಿನಾ ಮರಿನ್‍ಗೆ ಗೆ ಹಿ ಬಿಂಗ್‌ಜಿಯಾವೊ ಉತ್ತಮ ಪೈಪೋಟಿ ನೀಡಿದರು. ಮೊದಲ ಗೇಮ್‌ನಲ್ಲಿ 13–21ರಿಂದ ಹಿನ್ನಡೆ ಅನುಭವಿಸಿದ ಕರೊಲಿನಾ ಉಳಿದೆರಡು ಗೇಮ್‌ಗಳಲ್ಲಿ ಅಮೋಘ ಆಟವಾಡಿ 21–16 ಮತ್ತು 21–13ರಿಂದ ಗೆದ್ದಿದ್ದರು.

World Badminton Championship-2018,P.V Sindhu,loses to Carolina Marin in final

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ