ದನಗಳ್ಳನೆಂಬ ಶಂಕೆ ಹಿನ್ನಲೆ: ವ್ಯಕ್ತಿಯನ್ನು ಹೊಡೆದು ಸಾಯಿಸಿದ ಗುಂಪು

ನವದೆಹಲಿ:ಆ-4: ಗೋ ಕಳ್ಳಸಾಗಾಟಗಾರನೆಂದು ಶಂಕಿಸಿ ವ್ಯಕ್ತಿಯೋರ್ವನನ್ನು ಉದ್ರಿಕ್ತ ಗುಂಪು ಹೊಡೆದು ಕೊಂದ ಘಟನೆ ಹರಿಯಾಣದಲ್ಲಿ ನಡೆದಿದೆ.

ಹರಿಯಾಣದ ಪಲವಾಲ್‌ ಜಿಲ್ಲೆಯ ಬೆಹರೋಲಾ ಗ್ರಾಮದಲ್ಲಿ ದನ ಕಳ್ಳನೆಂಬ ಶಂಕೆಯಲ್ಲಿ ಗ್ರಾಮಸ್ಥರು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ. ಈತನ ಜತೆಗಿದ್ದ ಇನ್ನಿಬ್ಬರು ಸ್ಥಳದಿಂದ ಪಲಾಯನ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಸಹೋದರರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ. ಹಿಂಸೆಯಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ರಾಜಸ್ಥಾನದ ಅಲವಾರ್ ನಲ್ಲಿ ಗೋ ಕಳ್ಳನೆಂಬ ಶಂಕೆ ಮೇರೆಗೆ ಗುಂಪೊಂದು ವ್ಯಕ್ತಿಯನ್ನು ಹೊಡೆದು ಹತ್ಯೆಗೈದ ಘಟನೆ ಬೆನ್ನಲ್ಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
Man lynched in Haryana over suspicion of cattle theft, 1 arrested

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ