ಟಿ20 ಕ್ರಿಕೆಟ್‍ನಲ್ಲಿ ವೇಗದ ಅರ್ಧ ಶತಕ ಸಿಡಿಸಿ ದಾಖಲೆ ಬರೆದ ಭಾರತದ ಸ್ಮೃತಿ ಮಂಧನ!

ಟೌನ್ಟನ್: ಕೆಐಎ ಸೂಪರ್ ಲೀಗ್(ಕೆಎಸ್ಎಲ್) ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನ ವೇಗದ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ನ ಟೌನ್ಟನ್ ನಲ್ಲಿ ನಿನ್ನೆ ನಡೆದ ಕೆಎಸ್ಎಲ್ ಟಿ20 ಪಂದ್ಯದಲ್ಲಿ ವೆಸ್ಟರ್ನ್ ಸ್ಟೋಮ್ ತಂಡದ ಪರ ಆಡುತ್ತಿರುವ ಸ್ಮೃತಿ 18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದಾರೆ.
ಇನ್ನು ಸ್ಮೃತಿ ಮಂಧನ ವೇಗದ ಅರ್ಧ ಶತಕ ಸಿಡಿಸಿದ್ದು ಇದರ ಸದಾಯದಿಂದ ವೆಸ್ಟರ್ನ್ ಸ್ಟೋಮ್ ತಂಡ ಲಾಘ್ಬೊರಫ್ ಲೈಟನಿಂಗ್ ವಿರುದ್ಧ ಗೆಲುವು ಸಾಧಿಸಿದೆ.
ಇನ್ನು ಮಹಿಳೆಯರ ಟಿ20 ಕ್ರಿಕೆಟ್ ನಲ್ಲಿ ವೇಗದ ಅರ್ಧ ಶತಕ ಸಿಡಿಸಿದ ದಾಖಲೆ ನ್ಯೂಜಿಲೆಂಡ್ ತಂಡದ ಆಟಗಾರ್ತಿ ಸೋಫಿ ಡೆವಿನ್ ಹೆಸರಲ್ಲಿದೆ. ಸೋಫಿ ಭಾರತ ಮಹಿಳಾ ತಂಡದ ವಿರುದ್ಧ 18 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದರು. ಇದೀಗ ಸ್ಮೃತಿ ಮಂಧನ ಸೋಫಿ ದಾಖಲೆಯನ್ನು ಸಮಗಟ್ಟಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ