ಅತ್ಯಂತ ಹೆಚ್ಚು ಜನಪ್ರಿಯ ಆಟಗಾರ: ವಿರಾಟ್ ಕೊಹ್ಲಿ, ಕ್ರಿಕೆಟ್ ದಂತಕಥೆ ಸಚಿನ್ ಹಿಂದಿಕ್ಕಿದ ಎಂಎಸ್ ಧೋನಿ

ನವದೆಹಲಿ: ಟೀಂ ಇಂಡಿಯಾ ಕಂಡ ಅತ್ಯಂತ ಜನಪ್ರಿಯ ನಾಯಕ ಎಂಎಸ್ ಧೋನಿ ಹಿರಿಮೆಗೆ ಮತ್ತೊಂದು ಗರಿ ದೊರೆತಿದ್ದು, ದೇಶದ ಅತ್ಯಂತ ಜನಪ್ರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಯೂಗೋ (yougo) ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಧೋನಿ ಅತ್ಯಂತ ಜನಪ್ರಿಯ ಕ್ರಿಕೆಟಿಗ ಎಂದು ತಿಳಿದುಬಂದಿದೆ. ಧೋನಿ ಒಟ್ಟು 7.7ಪ್ರತಿಶತ ಫಲಿತಾಂಶವನ್ನು ಪಡೆದಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಹಾಗೂ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಪಟ್ಟಿಯಲ್ಲಿ ಕೊಹ್ಲಿ 4.8ರಷ್ಟು ಫಲಿತಾಂಶ ಪಡೆದಿದ್ದು, ಸಚಿನ್ 6.8ರಷ್ಟು ಫಲಿತಾಂಶ ಪಡೆದಿದ್ದಾರೆ.
ಇನ್ನು ಈ ವರದಿ ಇದೀಗ ಐಸಿಸಿ ಕ್ರಿಕೆಟ್ ಡಾಟ್ ಕಾಮ್ ನಲ್ಲೂ ಲಭ್ಯವಿದೆ. ಇನ್ನು ದೇಶದ ಅತ್ಯಂತ ಜನಪ್ರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದುವರೆದಿದ್ದಾರೆ.
ತಮ್ಮ ಅದ್ಬುತ ಆಟ ಮತ್ತು ಅಮೋಘ ನಾಯಕತ್ವದ ಮೂಲಕ ಭಾರತ ಕ್ರಿಕೆಟ್ ತಂಡವನ್ನು ಅದ್ಬುತವಾಗಿ ಮುನ್ನಡೆಸಿದ್ದ ಧೋನಿ, ದೇಶದ ಅತ್ಯಂತ ಯಶಸ್ವೀ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದರು. 2009ರಲ್ಲಿ ಭಾರತ ತಂಡವನ್ನು ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಬಾರಿಗೆ ನಂಬರ್ ಸ್ಥಾನಕ್ಕೇರಿಸಿದ್ದ ಕೀರ್ತಿಯೂ ಧೋನಿಗೆ ಸಲ್ಲುತ್ತದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ