ಹಿಮಾ ದಾಸ್ ಕೋಚ್ ನಿಪೋನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಅಸ್ಸಾಂ:ಜು-೩೦: ವಿಶ್ವ ಅಥ್ಲೆಟಿಕ್ಸ್‌ನ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕುರುಕುಳ ಆರೋಪ ಕೇಳಿಬಂದಿದೆ.

ಹಿಮಾ ದಾಸ್ ಕೋಚ್ ನಿಪೋನ್ ದಾಸ್ ವಿರುದ್ಧ 20 ವರ್ಷದ ಯುವತಿಯೊಬ್ಬಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೇ ತಿಂಗಳಲ್ಲಿ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಯುವತಿದೂರಿದ್ದಾರೆ.

“ಸಾರುಸ್​ಜೈ ಸ್ಟೇಡಿಯಂನಲ್ಲಿ ಟ್ರೇನಿಂಗ್ ಸಮಯದಲ್ಲಿ ನಿಪೋನ್​ ಕೋಚ್​​ ಮಾಡುತ್ತಿದ್ದ ವೇಳೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಸಿಷ್ಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. “ಸಹಕರಿಸದಿದ್ದರೆ, ಟ್ರೇನಿಂಗ್​ ಸೆಷನ್​ನಿಂದ ಅಮಾನತು​ ಮಾಡುವ ಬೆದರಿಕೆ ಒಡ್ಡಿದ್ದರು ಎಂದೂ ಯುವತಿ ಹೇಳಿಕೆ ನೀಡಿದ್ದಾಳೆ.

ಆದರೆ, ಯುವತಿ ಮಾಡಿದ ಎಲ್ಲಾ ಆರೋಪಗಳನ್ನ ನಿಪೋನ್​ ಅಲ್ಲಗಳೆದಿದ್ದಾರೆ. ಯುವತಿ ತನ್ನನ್ನ ರಾಷ್ಟ್ರೀಯ ಅಂತಾರಾಜ್ಯಗಳ ಚಾಂಪಿಯನ್​ ಶಿಪ್​​ಗೆ ಸೆಲೆಕ್ಟ್​ ಮಾಡದೇ ಇರುವುದರಿಂದ ಈ ರೀತಿ ಪ್ರತೀಕಾರ ತೀರಿಸಿಕೊಳ್ಳುವ ಯತ್ನ ಮಾಡ್ತಿದ್ದಾರೆ ಎಂದು ನಿಪೋನ್ ಪ್ರತ್ಯಾರೋಪ ಮಾಡಿದ್ದಾರೆ.

Hima Das Coach, Nipon Das, Sexual Assault Allegations,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ