ಆಂಗ್ಲರ ವಿರುದ್ಧ ಕದನಕ್ಕೆ ಸಜ್ಜಾಗಲು ಬರ್ಮಿಂಗ್ಯಾಮ್‍ಗೆ ಬರಲಿದೆ ಕೊಹ್ಲಿ ಪಡೆ

ಬರ್ಮಿಂಗ್ಯಾಮ್:ಜು-೨೫: ಆಂಗ್ಲರ ವಿರುದ್ದದ ಟೆಸ್ಟ್ ಸರಣಿಗೆ ಇನ್ನು ಒಂದು ವಾರ ಬಾಕಿ ಇದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೊದಲ ಟೆಸ್ಟ್ ನಲ್ಲಿ ರೆಡಿಯಾಗುವ ಹಿನ್ನೆಲೆಯಲ್ಲಿ ಬರ್ಮಿಂಗ್ಯಾಮ್‍ಗೆ ಮೊದಲೆ ಬಂದು ಇಳಿಯಲಿದೆ.

ಈ ಕಾರಣಕ್ಕಾಗಿ ಎಸೆಕ್ಸ್ ವಿರುದ್ದದ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನ ಒಂದು ದಿನ ಬೇಗನೆ ಕಡಿತಗೊಳಿಸಲಾಗಿದೆ. ಬರ್ಮಿಂಗ್ಯಾಮ್‍ಗೆ ಕೊಹ್ಲಿ ಪಡೆ ಬೇಗ ಬಂದಿಳಿಯಲಿದೆ.

ಟೀಂ ಇಂಡಿಯಾ ಈಗಾಗಲೇ ಟಿ20 ಸರಣಿಯಲ್ಲಿ ಗೆದ್ದು ಏಕದಿನ ಸರಣಿಯಲ್ಲಿ ಸೋತು ಸಿಹಿ-ಕಹಿ ಎರಡನ್ನು ಅನುಭವಿಸಿದೆ. ನಿನ್ನೆಯಷ್ಟೆ ಪ್ರಕಟವಾದ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ಟೀಂ ಇಂಡಿಯಾ ಮೊದಲನೇ ಸ್ಥಾನ ಪಡೆದಿದೆ. ಈ ಅಗ್ರಸ್ಥಾನವನ್ನ ಕಾಪಾಡಿಕೊಳ್ಳಬೇಕಿದ್ದಲ್ಲಿ ಆಂಗ್ಲರ ವಿರುದ್ಧ ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ