ಹೆಂಡತಿ, ಮಗಳ ಮೇಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ – 24 ಕ್ಷುಲಕ್ಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಹೆತ್ತ‌ ಮಗಳು ಹಾಗೂ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಳೇ ಹುಬ್ಬಳ್ಳಿಯ ಗೌಸಿಯಾ ಟೌನ್ ನಲ್ಲಿ ತಡರಾತ್ರಿ ನಡೆದಿದೆ.
ಮೆಹಬೂಬ್ ಸಾಬ್ ಸವಣೂರು ಎಂಬಾತನೇ ಹಲ್ಲೆ ನಡೆಸಿ ಪರಾರಿಯಾದ ಪಾಪಿ ತಂದೆಯಾಗಿದ್ದಾನೆ.
ಈ ಮೆಹಬೂಬ್ ಸಾಬ್ ಮಗಳು ಕರಿಷ್ಮಾ ಗಂಡನ ಮನೆ ತೊರೆದು ಬಂದು ಕಳೆದ ಮೂರು ತಿಂಗಳಿಂದ ತವರು ಮನೆಯಲ್ಲಿದ್ದಳು.‌ ಈ ವಿಷಯಕ್ಕ ಸಂಬಂಧಿಸಿದಂತೆ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು.‌ ನಿನ್ನೆ ತನ್ನ ಮಗಳಿಗೆ ಗಂಡನ ಹೊಗುವಂತೆ ಹೇಳಿದ್ದಾನೆ.‌ ಆಗ ಜಗಳ ಶುರುವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಮೆಹಬೂಬ್ ಸಾಬ್, ಪತ್ನಿ ಶಹನಾಜ್ ಸವಣೂರು, ಮಗಳು ಕರಿಷ್ಮಾ ಸೇರಿದಂತೆ ಜಗಳ ಬಿಡಿಸಲು ಬಂದ ಮೂವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಶಹನಾಜ್ ಹಾಗೂ‌ಕರಿಷ್ಮಾ ಅವರಿಗೆ ಗಂಭೀತವಾದ ಗಾಯಗಳಾಗಿದ್ದು, ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಹಲ್ಲೆ ನಡೆಸಿದ ಮೆಹಬೂಬ್ ಸಾಬ್ ಪರಾರಿಯಾಗಿದ್ದಾನೆ. ಈ ಸಂಬಂಧ ಕಸಬಾ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ