ಅಭಿಮಾನಿಗಳಿಗೆ ಪ್ರಧಾನಿ ಮೋದಿ ಉತ್ತರವೇನು..?

ನವದೆಹಲಿ:ಜು-೨೨: ಸಂಸತ್ ಮುಂಗಾರು ಅಧಿವೇಶನದಲ್ಲಿ ಕಾರ್ಯನಿರತರಾಗಿದ್ದ ಪ್ರಧಾನಿ ಮೋದಿ ಇಂದು ಕೊಂಚ ನಿರಾಳರಾಗಿದ್ದರು. ಟ್ವೀಟರ್ ನಲ್ಲಿ ಅವರ ಅಭಿಮಾನಿಗಳು ಮಾಡಿದ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಮುಂಬೈ ಮೂಲದ ಶಿಲ್ಪಿ ಅಗರ್ವಾಲ್ ಅವರು ಪ್ರಧಾನಿಗಳೇ ನೀವು ನಗುತ್ತಿರಬೇಕು, ಬಾಕಿ ಎಲ್ಲಾ ಚೆನ್ನಾಗಿದೆ ಎಂದು ಕೇಳಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ನೀವು ಹೇಳಿರುವುದನ್ನು ತೆಗೆದುಕೊಂಡಿದ್ದೇನೆ ಎಂದು ನಗುವ ಎಮೋಜಿಯನ್ನು ಹಾಕಿದ್ದಾರೆ.

60-70ರ ಹೊಸ್ತಿನಲ್ಲಿಯೂ ನೀವು ಬಳಲದಂತೆ ಹೇಗೆ ಇರುತ್ತೀರಿ ಎಂದು ಕೇಳಿದ್ದಕ್ಕೆ ಮೋದಿಯವರು, ‘ಈ ದೇಶದ 125 ಕೋಟಿ ಜನರ ಆಶೀರ್ವಾದ ನನಗೆ ಶಕ್ತಿ ನೀಡುತ್ತದೆ. ನನ್ನ ಎಲ್ಲಾ ಸಮಯವು ದೇಶಕ್ಕೆ’ ಎಂದು ಉತ್ತರಿಸಿದ್ದಾರೆ.

#IndiaTrustModi ಎಂಬ ಹ್ಯಾಶ್ ಟಾಗ್ ನೊಂದಿಗೆ ಕಳೆದ ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ಮತ ಗೆದ್ದದ್ದಕ್ಕೆ ಶೋಭಾ ಶೆಟ್ಟಿ ಎಂಬುವವರು ಅಭಿನಂದನೆ ಸಲ್ಲಿಸಿ ಕರ್ಮ ಯೋಗಿ ಎಂದು ಕರೆದಿದ್ದರು. ಅದಕ್ಕೆ ಮೋದಿ ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು ಎಂದು ಉತ್ತರಿಸಿದ್ದಾರೆ.

PM Narendra Modi,Fans,Tweet

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ