ಭಾರತಕ್ಕೆ ಮೊದಲ ಜಯ

ಬೆಂಗಳೂರು: ರೂಪಿಂದರ್ ಪಾಲ್ ಅವರ ಎರಡು ಗೋಲುಗಳ ನೆರವಿನಿಂದ ಆತಿಥೇಯ ಭಾರತ ಪುರುಷರ ಹಾಕಿ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 4-2 ಅಂತರದ ಗೋಲಗಳಿಂದ ಗೆದ್ದು ಬೀಗಿತು.
ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡ ಮೊದಲ ಪಂದ್ಯ ಗೆದ್ದು ಬೀಗಿತು. ಭಾರತ ಪರ ಅನುಭವಿ ಆಟಗಾರ ರೂಪಿಂದರ್ ಪಾಲ್ (2 ಮತ್ತು 34 ನಿಮಿಷದಲ್ಲಿ) ಗೋಲುಗಳನ್ನ ಬಾರಿಸಿದ್ರು, ನಂತರ ಮನ್‍ದೀಪ್ ಸಿಂಗ್ (15) ಮತ್ತು ಹರ್ಮನ್‍ಪ್ರೀತ್ ಸಿಂಗ್ (38) ನಿಮಿಷಗಳಲ್ಲಿ ತಲಾ ಒಂದೊಂದು ಗೋಲು ಬಾರಿಸಿದ್ರು. ಕಿವೀಸ್ ಪರ ಸ್ಟೀಫನ್ ಜೆನ್ನೆಸ್ (26, 55) ನಿಮಿಷಗಳಲ್ಲಿ ಗೋಲು ಬಾರಿಸಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ