ವಿಶ್ವಾಸ ಮತ ಗೆದ್ದ ಮೋದಿ

ನವದೆಹಲಿ: 199 ಮತಗಳ ಅಂತರದಿಂದ ವಿಶ್ವಾಸ ಮತ ಗೆದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಯಭೇರಿ ಸಾಧಿಸಿದೆ ಲೋಕಸಭೆಯಲ್ಲಿ ಒಟ್ಟು 451 ಸಂಸದರು ಹಾಜರಿದ್ದು ವಿಶ್ವಾಸ ಮತ ಸಾಬೀತಿಗೆ 226 ಮತಗಳ ಅವಶ್ಯಕತೆ ಇತ್ತು ಎನ್ ಡಿ ಎ ಸರ್ಕಾರದ ವಿರುದ್ದ 126 ಮತಗಳು ಚಲಾವಣೆಯಾಗಿದ್ದು ಎನ್ ಡಿ ಎ ಸರ್ಕಾರದ ಪರ 325 ಮತಗಳು ಚಲಾವಣೆಯಾದವು 199 ಮತಗಳ ಅಂತರದಿಂದ ಎನ್ ಡಿ ಎ ಸರ್ಕಾರ ಗೆಲುವು ಸಾಧಿಸಿದೆ ಇದರಿಂದ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳಿಗೆ ಭಾರಿ ಮುಖಭಂಗವಾಗಿದೆ ಸತತ 12 ಗಂಟೆಗಳ ಕಾಲ ನಡೆದ ವಿಶ್ವಾಸ ಮತ ಕಲಾಪಕ್ಕೆ ತೆರೆ ಬಿದ್ದಿದ್ದು ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ