ಪ್ರಪಾತಕ್ಕೆ ಉರುಳಿದ ಸಾರಿಗೆ ಬಸ್: 16 ಮಂದಿ ಸಾವು

ಡೆಹರಾಡೂನ್‌ :ಜು-೧೯: ಸಾರಿಗೆ ಬಸ್ ವೊಂದು ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ 16 ಮಂದಿ ಸಾವನ್ನಪ್ಪಿ, ಒಂಭತ್ತಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಾಂಡದ ಸೂರ್ಯಧಾರ್ ನಲ್ಲಿ ಸಂಭವಿಸಿದೆ.

ಹೃಷೀಕೇಶ – ಗಂಗೋತ್ರಿ ಹೈವೇಯಲ್ಲಿ ಸೂರ್ಯಧಾರ್‌ ಎಂಬಲ್ಲಿಗೆ ಸಮೀಪ ಬಸ್ ಚಲಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.ಬಸ್ಸು 250 ಮೀಟರ್‌ ಆಳದ ಪ್ರಪಾತಕ್ಕೆ ಬಿದ್ದಿದೆ. ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರು ಇದ್ದರೆಂದು ತಿಳಿದು ಬಂದಿದೆ.

ಸ್ಥಳಕ್ಕೆ ಧಾವಿಸಿರುವ ಸ್ಥಳೀಯಾಡಳಿತ ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

16 killed,bus falls 250-metre deep gorge, uttarakhand

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ