ಟ್ರ್ಯಾಕ್ಟರ್‍ನಿಂದ ಆಯತಪ್ಪಿ ಬಿದ್ದ ರೈತ ಸಾವು

Varta Mitra News

ಕೊಳ್ಳೇಗಾಲ,ಜು.18 – ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್‍ನಿಂದ ಆಯತಪ್ಪಿ ಬಿದ್ದ ರೈತ ಮೃತಪಟ್ಟಿರುವ ಘಟನೆ ಕೊಳ್ಳೆಗಾಲ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಕೊತ್ತನೂರು ಗ್ರಾಮದ ಚೆನ್ನೇಗೌಡ(60) ಮೃತಪಟ್ಟ ರೈತ.
ನಿನ್ನೆ ಸಂಜೆ ತಮ್ಮ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದವರ ಪಕ್ಕದಲ್ಲಿ ಇವರು ಕುಳಿತಿದ್ದರು. ಈ ವೇಳೆ ಟ್ರ್ಯಾಕ್ಟರ್ ಆಯತಪ್ಪಿದಾಗ ಚಿನ್ನೇಗೌಡ ಟ್ರ್ಯಾಕ್ಟರ್‍ಗೆ ಅಳವಡಿಸಿದ್ದ ಕಲ್ಟಿವೇಟರ್‍ಗೆ ಸಿಕ್ಕಿಕೊಂಡು ಗಂಭೀರ ಗಾಯಗೊಂಡಿದ್ದರು. ತಕ್ಷಣ ಇವರನ್ನು ಮೈಸೂರಿನ ಕೆಆರ್‍ಎಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ