ಲೋಕೋ ಪೈಲಟ್ ಗಳ ಅಮರಣಾಂತ ಉಪವಾಸ ಸತ್ಯಾಗ್ರಹ

ಹುಬ್ಬಳ್ಳಿ- ವಿವಿಧ ಬೇಡಿಕೆಗೆ ಆಗ್ರಹಿಸಿ ನೂರಾರು
ಲೋಕೋ ಪೈಲ್‌ಗಳು ಹುಬ್ಬಳ್ಳಿಯ ರೈಲ್ವೆ ಜಿಎಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಹುಬ್ಬಳ್ಳಿಯ ರೈಲ್ವೆ ಜಿ.ಎಮ್ ಕಚೇರಿ ಮುಂದುಗಡೆ ಪ್ರತಿಭಟನೆ ಮಾಡುತ್ತಿರುವ ರೈಲು ಚಾಲಕರು(ಲೋಕೋ ಪೈಲಟ್), ಪ್ರಮುಖ ಬೇಡಿಕೆಗಳಾದ ಬಾಕಿ ಇರುವ ಬತ್ಯೆ ಹಾಗೂ ಬತ್ಯೆಯಲ್ಲಿ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ತಮ್ಮ ಬೇಡಿಕೆಯನ್ನು ಆಲಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಲೋಕೋ ಪೈಲಟ್‌ಗಳಿಗೆ ಒಂದು ವರ್ಷದಿಂದ ಬಿಡುಗಡೆಯಾಗದ ಭತ್ಯೆ ಹಣವನ್ನ ಶೀಘ್ರವಾಗಿ ಬಿಡುಗಡೆ ಮಾಡಬೇಕು. ಪ್ರತಿ 250 ಕಿಮೀ ನೀಡುವ 165 ರೂಪಾಯಿ ಭತ್ಯೆ ಹಣವನ್ನ 750 ವರೆಗೂ ನಿಗದಿ ಮಾಡಬೇಕು. ಇನ್ನು ಪಿಂಚಣಿ ಹಣವನ್ನ ನ್ಯಾಯಸಮ್ಮತವಾಗಿ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಅಲ್ದೆ, ಈ ಎಲ್ಲ ಬೇಡಿಕೆ ಈಡೇರೋವರೆಗೂ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ