ಬಿರುಗಾಳಿ ಸಹಿತ ಭಾರೀ ಮಳೆ: ಮುರಿದು ಬಿದ್ದ ಗಾಳಿಯಂತ್ರದ ರಕ್ಕೆಗಳು

ಚಿತ್ರದುರ್ಗ:ಜು-17: ಚಿತ್ರದುರ್ಗದಲ್ಲಿ ಭಾರೀ ಗಾಳಿ ಸಮೇತ ತುಂತುರು ಮಳೆ ಹಿನ್ನೆಲೆಯಲ್ಲಿ ಗಿರಿಧಾಮದಲ್ಲಿ ಅಳವಡಿಸಿದ್ದ ಗಾಳಿ ಯಂತ್ರದ ರೆಕ್ಕೆಗಳಿಗೆ ಹಾನಿ ಉಂಟಾಗಿದೆ.

ಕುರುಮರಡಿಕೆರೆ ಗ್ರಾಮದ ಬಳಿಯ ಗಿರಿಧಾಮದಲ್ಲಿ ಈ ಗಾಳಿಯಂತ್ರ ಅಳವಡಿಸಲಾಗಿತ್ತು. ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಯಂತ್ರದ ಮೂರು ರೆಕ್ಕೆ ತುಂಡಾಗಿ ಬಿದ್ದಿವೆ. ಗಾಳಿಯಂತ್ರದ ರಕ್ಕೆಗಳು ತುಂಡಾಗಿ ಬೀಳುತ್ತಿರುವ ದೃಷ್ಯಗಳನ್ನು ಸ್ಥಳೀಯರು ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನು ವೀಕ್ಷಣೆ ಮಾಡಿರುವ ಸ್ಥಳೀಯರು ಭಾರೀ ಗಾಳಿಗೆ ಭಯಭೀತರಾಗಿದ್ದಾರೆ.

Chitradurga,heavy rain,wind mill

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ