ಬಾಲಿವುಡ್ ಹಿರಿಯ ನಟಿ ರೀಟಾ ಭಾದುರಿ ವಿಧಿವಶ

ಮುಂಬೈ:ಜು-17: ಬಾಲಿವುಡ್ ನ ಹಿರಿಯ ನಟಿ ರೀಟಾ ಬಾದುರಿ ಸೋಮವಾರ ತಡರಾತ್ರಿ ಮುಂಬೈನಲ್ಲಿ ವಿಧಿವಶರಾಗಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೀಟಾ ಅವರಿಗೆ 62 ವರ್ಷ ವಯಸ್ಸಾಗಿತ್ತು. ಅವರನ್ನು 10 ದಿನಗಳಿಂದ ಮುಂಬೈನ ಸುಜಾಯ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು.

ಇವರ ಸಾವಿನ ಸುದ್ಧಿಯನ್ನು ಶಿಶಿರ್ ಶರ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಅಂತ್ಯ ಸಂಸ್ಕಾರ ಮಂಗಳವಾರ ಮಧ್ಯಾಹ್ಯ ಮುಂಬೈನ ಅಂಧೇರಿಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಿನಿಮಾ, ಧಾರವಾಹಿಗಳಲ್ಲಿ ಸಕ್ರಿಯರಾಗಿದ್ದ ಇವರು ಸ್ಟಾರ್ ಭಾರತದಲ್ಲಿ ಪ್ರಸಾರವಾಗುತ್ತಿರುವ ನಿಮ್ಕಿ ಮುಖಿಯಾ ಧಾರವಾಹಿಯಲ್ಲಿ ಅಜ್ಜಿಯ ಪಾತ್ರ ನಿರ್ವಹಿಸುತ್ತಿದ್ದರು. ರೀಟಾ ಅವರು ಇದುವರೆಗೆ ಸಾರಾಬಾಯ್ ವರ್ಸಸ್ ಸಾರಾಬಾಯ್, ಕುಂಕುಮ್ ಮತ್ತು ಅಮಾನತ್ ಸೇರಿದಂತೆ 20ಕ್ಕೂ ಹೆಚ್ಚು ಧಾರವಾಹಿಗಳು, ರಾಜಾ, ಜೂಲಿ, ಬೇಟಾ, ಹೀರೋ ನಂ. 1, ವಿರಾಸತ್, ಮೇ ಮಾಧುರಿ ದೀಕ್ಷಿತ್ ಬನ್ನಾ ಚಹತಿ ಹೂ, ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಇವರ ರಾಜಾ(1975) ಸಿನಿಮಾದ;ಲ್ಲಿನ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತ್ತು.

Veteran Actress Rita Bhaduri Passes Away

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ