ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

Execution Sling Hanging Hangman Knot Penalty Rope

ಕೊಳ್ಳೆಗಾಲ, ಜು.13- ಕುಟುಂಬ ತೊರೆದು ಬಂದ ಕೂಲಿ ಕಾರ್ಮಿಕನೊಬ್ಬ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದ ಅಂಕಯ್ಯ (63) ಎಂಬಾತನೇ ಸಾವನ್ನಪ್ಪಿರುವ ಕೂಲಿ ಕಾರ್ಮಿಕ. ಈತನಿಗೆ ಹೆಂಡತಿ ಹಾಗೂ ಮೂವರು ಮಕ್ಕಳಿದ್ದು ವಯಸ್ಸಾದ ನಂತರ ಹೆಂಡತಿ ಮಕ್ಕಳು ಈತನನ್ನು ನಿರ್ಲಕ್ಷಿಸಿದ್ದರಿಂದ ಮನೆ ತೊರೆದು ಹನೂರು ಸಮೀಪದ ಅಲಗು ಮೂಲೆ ಗ್ರಾಮದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ನಿನ್ನೆ ಈತನ ಸುಳಿವು ಕಾಣದಿದ್ದರಿಂದ ಅನುಮಾನಗೊಂಡ ಈತನೊಡನೆ ಕೂಲಿ ಮಾಡುತ್ತಿದ್ದ ಇತರರು ಹುಡುಕಾಡಿದಾಗ ಜಮೀನಿನ ಗುಡಿಸಲೊಂದರಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಹನೂರು ಠಾಣೆಗೆ ವಿಷಯ ತಿಳಿಸಲಾಗಿ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಪುಟ್ಟಮಾದಯ್ಯ ಹಾಗೂ ಹನೂರು ಪೆÇಲೀಸರು ಪರಿಶೀಲನೆ ನಡೆಸಿ ನಂತರ ಶವವನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ