ಏಕದಿನ ಸರಣಿಯಲ್ಲೂ ಆಂಗ್ಲರಿಗೆ ಮಣ್ಣು ಮುಕ್ಕಿಸಿದರೇ ಟೀಂ ಇಂಡಿಯಾ ನಂ.1!

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಟಿ20 ಸರಣಿ ಗೆಲುವು ಉತ್ಸಾಹವನ್ನು ಹೆಚ್ಚಿಸಿದ್ದು ಇಂದಿನಿಂದ ಆರಂಭವಾಗಲಿರುವ ಏಕದಿನ ಪಂದ್ಯಗಳ ಸರಣಿಯನ್ನು ಕೈವಶ ಮಾಡಿಕೊಂಡರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 3-0ಯಿಂದ ಕ್ಲೀನ್ ಸ್ವೀಪ್ ಸಾಧಿಸಿದರೆ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೆ ನಂ.1 ಪಟ್ಟಕೇರುವ ಅವಕಾಶವಿದೆ. ಹಾಲಿ ರ್ಯಾಂಕಿಂಗ್ ನಲ್ಲಿ ಇಂಗ್ಲೆಂಡ್ 126 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ 122 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ.
ಕಳೆದ ಏಪ್ರಿಲ್ ವರೆಗೆ ಅಗ್ರಸ್ಥಾನದಲ್ಲಿದ್ದ ಟೀಂ ಇಂಡಿಯಾ ಮೇ ಆರಂಭದಲ್ಲಿ ವಾರ್ಷಿಕ ಪರಿಷ್ಕರಣೆಯ ವೇಳೆ ಆಂಗ್ಲರಿಗೆ ನಂ 1 ಪಟ್ಟ ಬಿಟ್ಟುಕೊಟ್ಟಿತ್ತು. ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಸಾಧಿಸಿದ್ದರೆ 3 ಅಂಕ ಕಲೆಹಾಕಲಿದ್ದು 125 ಅಂಕದೊಂದಿಗೆ ಅಗ್ರಸ್ಥಾನಕ್ಕೇರಲಿದೆ.
ಇನ್ನು ಸರಣಿಯಲ್ಲಿ 1 ಪಂದ್ಯ ಗೆದ್ದರೂ ಇಂಗ್ಲೆಂಡ್ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲಿದೆ. ಒಂದು ವೇಳೆ ಇಂಗ್ಲೆಂಡ್ 2-1ರಿಂದ ಸರಣಿ ಗೆದ್ದರೆ 1 ಅಂಕ ಸಂಪಾದಿಸಿ 127 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ