2019ರ ಲೋಕಸಭೆ ಚುನಾವಣೆ: ಸುಷ್ಮಾ, ಉಮಾ ಸೇರಿದಂತೆ ಬಿಜೆಪಿಯ 150 ಸಂಸದರಿಗಿಲ್ಲ ಟಿಕೆಟ್?

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಭರ್ಜರಿ ಕಸರತ್ತು ನಡೆಸುತ್ತಿರುವ ಬಿಜೆಪಿ 130ರಿಂದ 150 ಹಾಲಿ ಲೋಕಸಭಾ ಸದಸ್ಯರಿಗೆ ಟಿಕೆಟ್ ನೀಡುವುದು ಅನುಮಾನ ಎಂದು ಪಶ್ಚಿಮ ಬಂಗಾಳದ ಆನಂದ್ ಬಜಾರ್ ಪತ್ರಿಕೆ ವರದಿ ಮಾಡಿದೆ.
ಪತ್ರಿಕೆ ವರದಿಯಂತೆ ಅನಾರೋಗ್ಯದಿಂದ ಬಳಲುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ವಯಸ್ಸಿನ ಕಾರಣ ಮುರಳಿ ಮನೋಹರ್ ಜೋಷಿ, ಕರಿಯ ಮುಂಡಾ, ಶಾಂತ್ ಕುಮಾರ್, ಖಂಡೂರಿ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಇನ್ನು ಉಮಾ ಭಾರತಿ, ಸ್ಪೀಕರ್ ಸುಮಿತ್ರಾ ಮಹಾಜನ್, ಸಚಿವ ರಾಧಾ ಮೋಹನ್ ಸಿಂಗ್ 2019ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.
2019ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೆಬೇಕೆಂದು ವಿರೋಧ ಪಕ್ಷಗಳ ಮಹಾಮೈತ್ರಿಗೆ ಮುಂದಾಗುತ್ತಿರುವ ಕಾರಣ. ವಿರೋಧ ಪಕ್ಷಗಳ ಪ್ರಯತ್ನವನ್ನು ಹಿಮ್ಮೆಟ್ಟಿಸಬೇಕಾದರೆ ಹಿರಿಯ ತಲೆಯಾಳುಗಳನ್ನು ಬಿಟ್ಟು ಉತ್ಸಾಹಿ ಯುವ ಮುಖಂಡರಿಗೆ ಟಿಕೆಟ್ ನೀಡಬೇಕೆಂಬುದು ಬಿಜೆಪಿಯ ನಿಲುವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ