ಫ್ರಾನ್ಸ್ ಪರ ಗೋಲು ಬಾರಿಸಿದ್ದು ಉಮ್ಟಿಟಿ ಆದರೂ, ಹೀರೋ ಆಗಿದ್ದು ಮಾತ್ರ ಹ್ಯೂಗೋ ಲಾಲೋರಿಸ್!

ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಲ್ಡಿಯಂ ತಂಡದ ಆಕ್ರಮಣಕಾರಿ ಆಟದ ಹೊರತಾಗಿಯೂ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಫ್ರಾನ್ಸ್ ಗೋಲ್ ಕೀಪರ್ ಹ್ಯೂಗೋ ಲಾಲೋರಿಸ್..
ಹೌದು, ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹ್ಯೂಗೋ ಲಾಲೋರಿಸ್ ಫ್ರಾನ್ಸ್ ಅಭಿಮಾನಿಗಳಿಗೆ ದೇವರಾಗಿ ಕಂಡರು. ತೀವ್ರ ಕುತೂಹಲ ಮತ್ತು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಫ್ರಾನ್ಸ್ ತಂಡ 1-0 ಅಂತರದಲ್ಲಿ ರೋಚಕವಾಗಿ ಬೆಲ್ಜಿಯಂ ತಂಡವನ್ನು ಮಣಿಸಿ 12 ವರ್ಷಗಳ ಬಳಿಕ ವಿಶ್ವಕಪ್ ಫೈನಲ್ ಗೇರಿದೆ.
ಫ್ರಾನ್ಸ್ ಪರ ಸ್ಯಾಮುಯೆಸ್ ಉಮ್ಟಿಟಿ ಗಳಿಸಿದ ಏಕೈಕ ಗೋಲು ಮತ್ತು ಹ್ಯೂಗೋ ಲಾಲೋರಿಸ್ ಅದ್ಬುತ ಗೋಲ್ ಕೀಪಿಂಗ್ ಫ್ರಾನ್ಸ್ ತಂಡವನ್ನು ಫೈನಲ್ ಗೇರಿಸಿದೆ.
ಗೋಲ್ ಕೀಪರ್ ಹ್ಯೂಗೋ ಲಾಲೋರಿಸ್ ಕಾರ್ಯಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ