ಬೌಲರ್ ಗಳು ಅದ್ಬುತವಾಗಿ ಕಮ್ ಬ್ಯಾಕ್ ಮಾಡಿದರು: ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡದ ಮೊತ್ತದಲ್ಲಿ 25 ರಿಂದ 30 ರನ್ ಗಳು ಕಡಿತವಾಗಲು ಬೌಲರ್ ಗಳ ಶ್ರಮವಿದೆ

ಬ್ರಿಸ್ಟೋಲ್: ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಬೌಲರ್ ಗಳ ಪಾತ್ರ ನಿರ್ಣಾಯಕವಾಗಿತ್ತು. ನಮ್ಮ ತಂಡದ ಬೌಲರ್ ಗಳು ಅದ್ಬುತವಾಗಿ ಕಮ್ ಬ್ಯಾಕ್ ಮಾಡಿದರು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಬ್ರಿಸ್ಟೋಲ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳ ಅಂತರದ ಭರ್ಜರಿ ಜಯ ಸಾಧಿಸಿದ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ,  ಟೀಂ ಇಂಡಿಯಾ ಬೌಲರ್ ಗಳ ಪ್ರದರ್ಶವನ್ನು ಕೊಂಡಾಡಿದ್ಜಾರೆ.
‘ನಿಜಕ್ಕೂ ಇಂಗ್ಲೆಂಡ್ ತಂಡ 25 ರಿಂದ 30 ರನ್ ಹೆಚ್ಚು ರನ್ ಗಳಿಸಬಹುದಿತ್ತು. ಆದರೆ ಅದಕ್ಕೆ ನಮ್ಮ ತಂಡದ ಬೌಲರ್ ಗಳು ಅವಕಾಶ ನೀಡಲಿಲ್ಲ. ಇನ್ನಿಂಗ್ಸ್ ನ ಅಂತಿಮ ಹಂತದಲ್ಲಿ ನಮ್ಮ ಬೌಲರ್ ಗಳು ಕಮ್ ಬ್ಯಾಕ್ ಮಾಡಿದ್ದು, ಇಂಗ್ಲೆಂಡ್ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಹಾರ್ದಿಕ್ ಪಾಂಡ್ಯಾ ತಮ್ಮ ಸಾಮರ್ಥ್ಯವನ್ನು ಮತ್ತೆ ಪ್ರದರ್ಶನ ಮಾಡಿದರು. ಯಾವುದೇ ತಂಡದಲ್ಲಿ ಇಂತಹ ಪ್ರತಿಭಾನ್ವಿತ ಆಟಗಾರ ಇರುವುದು ಆ ತಂಡದ ಹಿರಿಮೆಯನ್ನು ಹೆಚ್ಚಿಸುತ್ತದೆ. ಯಾವ ಸಂದರ್ಭದಲ್ಲಿ ತಂಡಕ್ಕೆ ಏನು ಬೇಕೋ ಅದನ್ನು ಪಾಂಡ್ಯಾ ನೀಡುತ್ತಾರೆ ಎಂದು ಕೊಹ್ಲಿ ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ