ಟ್ರಾಕ್ಟರ್ ಮತ್ತು ಬೈಕ್ ಡಿಕ್ಕಿ ಸವಾರ ಸಾವು

ಕನಕಪುರ, ಜು.9-ಟ್ರಾಕ್ಟರ್ ಮತ್ತು ಹೀರೋಹೋಂಡಾ ಶೈನ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಿನ್ನೆ ಸಂಜೆ ಚನ್ನಸಂದ್ರ ಗ್ರಾಮದ ತಿರುವಿನ ಬಳಿ ಸಂಭವಿಸಿದೆ.
ಚನ್ನಸಂದ್ರ ಗ್ರಾಮದ ಮಂಜುನಾಥ್ (45) ಮೃತಪಟ್ಟ ಬೈಕ್ ಸವಾರ.
ಕನಕಪುರದಿಂದ ಬಂದು ಚನ್ನಸಂದ್ರ ಗ್ರಾಮಕ್ಕೆ ಬಾಡಿಗೆ ಜೆಸಿಬಿ ವಾಹನವನ್ನು ನೋಡಲು ಹೋಗುತ್ತಿದ್ದ ವೇಳೆ ಚನ್ನಸಂದ್ರ ಕಡೆಯಿಂದ ಬಂದ ಟ್ರಾಕ್ಟರ್ ರಸ್ತೆಯ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಸಂಭವಿಸಿದೆ. ತೀವ್ರ ಗಾಯಗೊಂಡಿದ್ದ ಮಂಜುನಾಥ್‍ರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾನೆ. ವಿಷಯ ತಿಳಿದ ಕೋಡಿಹಳ್ಳಿ ಪೆÇಲೀಸ್ ಠಾಣಾ ಅಧಿಕಾರಿ ಕುಮಾರಸ್ವಾಮಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ, ಅಪಘಾತಕ್ಕೀಡಾದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಅವನ ಪತ್ತೆಗೆ ಶೋಧ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ