ಟಿ20 ಸರಣಿ ಗೆಲುವಿನಲ್ಲೂ ದಾಖಲೆ ಬರೆದ ಭಾರತ, ಸತತ 6 ಸರಣಿ ಜಯ ‘ನ್ಯೂಜಿಲೆಂಡ್ ವಿರುದ್ಧ ಆರಂಭವಾದ ಟೀಂ ಇಂಡಿಯಾ ಜೈತ್ರ ಯಾತ್ರೆ ಇಂಗ್ಲೆಂಡ್ ನಲ್ಲೂ ಮುಗಿದಿಲ್ಲ’

ಬ್ರಿಸ್ಟೋಲ್: ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಜೈತ್ರಯಾತ್ರೆ ಮುಂದುವರೆದಿದ್ದು, ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಕೈ ವಶ ಮಾಡಿಕೊಳ್ಳುವ ಮೂಲಕ ಭಾರತ ತಂಡ ಸತತ 6 ಟಿ20 ಸರಣಿ ಗೆದ್ದ ಸಾಧನೆ ಮಾಡಿದೆ.
ಹೌದು.. ಇಂದು ಬ್ರಿಸ್ಟೋಲ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು ತನ್ನ ಕೈ ವಶ ಮಾಡಿಕೊಂಡಿದೆ. ಟೀಂ ಇಂಡಿಯಾಗೆ ಇದು ಸತತ 6ನೇ ಟಿ20 ಸರಣಿ ಜಯವಾಗಿದ್ದು, ಈ ಹಿಂದೆ ಭಾರತ ತಂಡ ನ್ಯೂಜಿಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ನಿಡಹಾಸ್ ತ್ರಿಕೋನ ಸರಣಿ, ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳನ್ನು ಗೆದ್ದುಕೊಂಡಿತ್ತು.
ಇದೀಗ ಇಂಗ್ಲೆಂಡ್ ವಿರುದ್ಧ ದ್ವಿಪಕ್ಷೀಯ ಟಿ20 ಸರಣಿಯನ್ನೂ ಗೆಲ್ಲುವ ಮೂಲಕ ಭಾರತ ತಂಡ ಸತತ 6 ಟಿ20 ಸರಣಿ ಗೆದ್ದ ದಾಖಲೆ ಬರೆದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ