ಫೀಫಾ ವಿಶ್ವಕಪ್ 2018 : 2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ ಸೆಮಿ ಫೈನಲ್ ಪ್ರವೇಶ

ನಿಜ್ನಿ ನವಗೊರಾಡ್ :  : ತೀವ್ರ ಕುತೂಹಲ ಮೂಡಿಸಿದ್ದ  ರಷ್ಯಾ ಫೀಫಾ ವಿಶ್ವಕಪ್ ಟೂರ್ನಿಯ  ಮೊದಲ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ ಸಮಿಫೈನಲ್ ಪ್ರವೇಶಿಸಿದೆ. ಪಂದ್ಯದ ಮೊದಲಾರ್ಧ ಹಾಗೂ ದ್ವಿತೀಯಾರ್ಧದಲ್ಲಿ  ಗಳಿಸಿದ ಗೋಲಿನ ನೆರವಿನಿಂದ ಫ್ರಾನ್ಸ್  ಸೆಮಿ ಫೈನಲ್ ಸುತ್ತು ಪ್ರವೇಶಿಸಲು ಸಾಧ್ಯವಾಗಿದೆ.

ಪಂದ್ಯ ಆರಂಭಗೊಂಡ 40 ನೇ ನಿಮಿಷದಲ್ಲಿ  ರಾಫೆಲ್  ವಾರೆನ್  ಅವರು ಫ್ರಾನ್ಸ್ ಪರ ಗೋಲು ದಾಖಲಿಸಿ  1-0  ಅಂತರದಿಂದ ಮುನ್ನಡೆ ತಂದುಕೊಟ್ಟರು.
ನಂತರ ದ್ವಿತೀಯಾರ್ಧದಲ್ಲಿ 61 ನೇ ನಿಮಿಷದಲ್ಲಿ ಅಂಟೊಯ್ನಿ  ಗ್ರೀಜ್ ಮನ್ ಮತ್ತೊಂದು ಗೋಲು ಭಾರಿಸುವ ಮೂಲಕ ಫ್ರಾನ್ಸ್   ಸೆಮಿಫೈನಲ್ ಪ್ರವೇಶಿಸಿತು.
2006ರ ನಂತರ ಫ್ರಾನ್ಸ್  ಸೆಮಿಫೈನಲ್ ಸುತ್ತು ಪ್ರವೇಶಿಸಿದ್ದು, ಸೆಂಟ್ ಫೀಟರ್ಸ್ ಬರ್ಗ್ ನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ  ಬೆಲ್ಜಿಯಂ ಅಥವಾ ಬ್ರಜಿಲ್ ವಿರುದ್ದ ಹೋರಾಟ ನಡೆಸಲಿದೆ. 16 ರಘಟ್ಟದ ಪಂದ್ಯದಲ್ಲಿ ಅರ್ಜೀಂಟೀನಾ ವಿರುದ್ಧ 4-3 ಅಂತರದಿಂದ ಗೆದ್ದ ಬಳಿಕ  ಆತ್ಮವಿಶ್ವಾಸ ಇಮ್ಮಡಿಗೊಂಡಿತ್ತು. ನಾನು ಉತ್ತಮ ತಂಡ ಹೊಂದಿರುವುದಾಗಿ ಫ್ರಾನ್ಸ್ ಕೋಚ್ ಡಿಡೈರ್ ದೆಸ್ ಚಾಂಸ್ ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ