1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಸಿದ ಸ್ವಿಡನ್ , ಕ್ವಾರ್ಟರ್ ಫೈನಲ್ ಪ್ರವೇಶ

ಸೆಂಟ್ ಪೀಟರ್ಸ್ ಬರ್ಗ್ : ರಷ್ಯಾದ  ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಫೀಫಾ ವಿಶ್ವಕಪ್ 2018 ಪುಟ್ಬಾಲ್ ಟೂರ್ನಿಯ 16 ರ ಘಟ್ಟದಲ್ಲಿ 1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್  ಸೋಲಿಸಿದ ಸ್ವಿಡನ್  , ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.ಪಂದ್ಯ ಆರಂಭಗೊಂಡ ಮೊದಲಾರ್ಧ ಯಾವುದೇ ತಂಡ ಗೋಲು ಗಳಿಸುವಲ್ಲಿ ವಿಫಲಗೊಂಡವು. ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ಕಂಡುಬಂದಿತ್ತು. ಆದರೆ, 66 ನೇ ನಿಮಿಷದಲ್ಲಿ  ಪೊರ್ಸ್ ಬರ್ಗ್  ಗೋಲು ಗಳಿಸುವ ಮೂಲಕ ಸ್ವಿಡನ್  ಗೆಲ್ಲಲು ನೆರವಾದರು.ಪೊರ್ಸ್ ಬರ್ಗ್  ಸಿಡಿಸಿದ ಗೋಲು ತಡೆಯುವಲ್ಲಿ ಸ್ವಿಟ್ಜರ್ಲ್ಯಾಂಡ್ ಗೋಲುಕೀಪರ್  ಯನ್ ಸೊಮ್ಮರ್  ವಿಫಲರಾದ್ದರಿಂದ ಸ್ವಿಡನ್  ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರೆ, ಸ್ವಿಟ್ಜರ್ಲ್ಯಾಂಡ್ ಸೋತು ನಿರಾಸೆ ಅನುಭವಿಸಿತು.ಪಂದ್ಯದ ಮೊದಲಾರ್ಧದಲ್ಲಿ ಸ್ವಿಟ್ಜರ್ಲ್ಯಾಂಡ್  ಉತ್ತಮ ಅವಕಾಶ ಹೊಂದಿತ್ತು, ಆದರೆ, ಗೋಲುಕೀಪರ್  ಯನ್ ಸೊಮ್ಮರ್  ಚೆಂಡು ರಕ್ಷಣೆ ಮಾಡುವಲ್ಲಿ ವಿಫಲಗೊಂಡರಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಗೆ ಶರಣಾಗಬೇಕಾಯಿತು.ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅಥವಾ ಕೊಲಂಬಿಯಾ ವಿರುದ್ಧ ಸ್ವಿಡನ್ ಸೆಣಸಾಟ ನಡೆಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ