ಮುಂಬೈ: ಕುಸಿಯಲು ಸಿದ್ಧವಾಗಿದೆ ಮತ್ತೊಂದು ಮೇಲ್ಸೇತುವೆ, ಟ್ವೀಟ್ ಮೂಲಕ ಪೊಲೀಸರ ಎಚ್ಚರಿಕೆ

ಮುಂಬೈ: ಅಂಧೇರಿ ಮೇಲ್ಸೇತುವೆ ಕುಸಿತ ಪ್ರಕರಣದ ಬೆನ್ನಲ್ಲೆ ಮುಂಬೈ ಪೊಲೀಸರು ಮತ್ತೊಂದು ಅಘಾತಕಾರಿ ಮಾಹಿತಿಯನ್ನು ಟ್ವೀಟ್ ಮಾಡಿದ್ದು ಗ್ರಾಂಟ್ ರೋಡ್ ಸ್ಟೇಷನ್ ನಲ್ಲಿರುವ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕುಸಿಯುವುದಕ್ಕೆ ಸಿದ್ಧವಾಗಿದೆ ಎಂದು ಎಚ್ಚರಿಸಿದ್ದಾರೆ.
ಗ್ರಾಂಟ್ ರೋಡ್ ಸ್ಟೇಷನ್ ಬಳಿ ಇರುವ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವ  ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ನಾನಾ ಚೌಕ್ ಮೂಲಕ ಕೆನ್ನೆಡಿ ಸೇತುವೆಗೆ ಬದಲಾವಣೆ ಮಾಡಲಾಗಿದೆ.
ಗ್ರಾಂಟ್ ರೋಡ್ ಸ್ಟೇಷನ್ ನಲ್ಲಿರುವ ಮೇಲ್ಸೇತುವೆ ಕುಸಿಯುವುದಕ್ಕೆ ಸಿದ್ಧವಾಗಿದೆ. ಆದ್ದರಿಂದ ನಾನಾ ಚೌಕ್ ಮೂಲಕ ಕೆನ್ನೆಡಿ ಸೇತುವೆಗೆ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ಮುಂಬೈ ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅಂಧೇರಿ ಸ್ಟೇಷನ್ ನಲ್ಲಿ ರೈಲು ಹಳಿ ಮೇಲೆಯೇ ಮೇಲ್ಸೇತುವೆ ಕುಸಿದುಬಿದ್ದಿತ್ತು. ಘಟನೆಯಲ್ಲಿ ಒಟ್ಟು 6 ಜನರು ಗಾಯಗೊಂಡಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ