ಮೆಕ್ಸಿಕೊ ಸೋಲಿಸಿದ ಬ್ರಜಿಲ್ , ಕ್ವಾರ್ಟರ್ ಫೈನಲ್ ಪ್ರವೇಶ

ಸಮರಾ ಅರೆನಾ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿಯ 16 ರ ಘಟ್ಟದಲ್ಲಿ ಮೆಕ್ಸಿಕೊ ವಿರುದ್ಧ 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಬ್ರಜಿಲ್  ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ನೇಮ್ಮಾರ್ ಮತ್ತು ರಾಬರ್ಟೋ ಫಿರ್ಮಿಮೊ ಕ್ರಮವಾಗಿ 51 ಹಾಗೂ 88 ನೇ ನಿಮಿಷದಲ್ಲಿ ಗಳಿಸಿದ ಗೋಲುಗಳ ನೆರವಿನಿಂದ  ಬ್ರಜಿಲ್  ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಸುತ್ತು ಪ್ರವೇಶಿಸಲು ಸಾಧ್ಯವಾಯಿತು.

ಈ ಮೂಲಕ  ಬ್ರಜಿಲ್  ಏಳು ವಿಶ್ವಕಪ್ ನಲ್ಲಿ  ಕ್ವಾರ್ಟರ್ ಫೈನಲ್  ಸುತ್ತು ಪ್ರವೇಶಿಸಿದಂತಾಗಿದ್ದು, ಈ ಸುತ್ತಿನಲ್ಲಿ ಬೆಲ್ಜಿಯಂ ಅಥವಾ  ಜಪಾನ್ ವಿರುದ್ಧ  ಸೆಣಸಾಡಲಿದೆ.

 ಈ ಮಧ್ಯೆ ಮೆಕ್ಸಿಕೊ 1986 ರಿಂದಲೂ  ಕ್ವಾರ್ಟರ್ ಫೈನಲ್ ಹಂತ ತಲುಪದೆ ನಿರಾಸೆ ಅನುಭವಿಸಿದೆ. ಮೆಕ್ಸಿಕೊ ಇತ್ತೀಚಿಗೆ ಬ್ರಜಿಲ್ ವಿರುದ್ಧ ನಡೆದ  ಏಳು  ಪಂದ್ಯಗಳಲ್ಲಿ ಗೆಲುವು ದಾಖಲೆ ಬರೆದಿತ್ತು.
ಆದರೆ. ಇಂದಿನ ಪಂದ್ಯದಲ್ಲಿ  ಮೊದಲ ಹಂತದಲ್ಲಿ ಸ್ವಲ್ಪ ಮಟ್ಟಿಗೆ ಪೈಪೋಟಿ ನೀಡಿದ್ದರೂ, ನಂತರದ ಹಂತದಲ್ಲಿ ಸೂಕ್ತ ಪ್ರದರ್ಶನ ತೋರದೆ ಸೋಲಿಗೆ ಶರಣಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ