2018ರ ಫಿಫಾ ವಿಶ್ವಕಪ್: ಜಪಾನ್ ಮಣಿಸಿ ಕ್ವಾರ್ಟರ್ ಫೈನಲ್ಗೆ ಬೆಲ್ಜಿಯಂ ಲಗ್ಗೆ

ಮಾಸ್ಕೋ(ರಷ್ಯಾ): ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಡಲು ತಂಡಗಳು ಕಸರತ್ತು ನಡೆಸಿವೆ.
ನಿನ್ನೆ ನಡೆದ ಪಂದ್ಯದಲ್ಲಿ ಜಪಾನ್ ತಂಡವನ್ನು 3-2 ಗೋಲುಗಳಿಂದ ಮಣಿಸಿದ ಬೆಲ್ಜಿಯಂ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ. ಉಭಯ ತಂಡಗಳು ತಲಾ ಎರಡು ಗೋಲುಗಳಿಂದ ಸಮಬಲ ಸಾಧಿಸಿದ್ದವು. ಈ ವೇಳೆ ಪಂದ್ಯ ಡ್ರಾನಲ್ಲಿ ಅಂತ್ಯವಾಗಲಿದೆ ಎಂದ ಊಹಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ನಸಿರ್ ಚಡ್ಲಿ ಗೋಲು ಬಾರಿಸಿ 3-2 ಗೋಲುಗಳಿಂದ ಪಂದ್ಯ ಗೆಲ್ಲಲು ಕಾರಣರಾದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ