ಪೆನಾಲ್ಟಿ ಶೂಟೌಟ್, ಡೆನ್ಮಾರ್ಕ್ ಮಣಿಸಿದ ಕ್ರೊಯೇಶಿಯಾ ಕ್ವಾರ್ಟರ್ ಫೈನಲ್‌ಗೆ

ಮಾಸ್ಕೊ: ಫಿಫಾ ವಿಶ್ವ ಫುಟ್ಬಾಲ್ ಟೂರ್ನಿಯಲ್ಲಿ ನಿನ್ನೆ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಕ್ರೊಯೇಶಿಯಾ ತಂಡ ಡೆನ್ಮಾರ್ಕ್ ನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕೇವಲ 58 ನಿಮಿಷಗಳ ನಂತರ ಡೆನ್ಮಾರ್ಕ್ ನ ಮಾತಿಯಸ್ ಜೊರ್ಗೆನ್ಸನ್ ಡೆನ್ಮಾರ್ಕ್ ತಂಡಕ್ಕೆ ಮುಂಚೂಣಿ ನೀಡಿದ್ದರು. ಆದರೆ 4ನೇ ನಿಮಿಷದಲ್ಲಿ ಕ್ರೊಯೇಶಿಯಾ ತಂಡದ ಮರಿಯೊ ಮಂಡ್ಸುಕಿಕ್ ಸಮತೋಲನ ಸಾಧಿಸಿ ಹೆಚ್ಚುವರಿ ಸಮಯದಲ್ಲಿ ಎರಡೂ ತಂಡಗಳು 1-1ರ ಸಮಬಲ ಸಾಧಿಸಿದ್ದವು.ಕೊನೆಗೆ ನಾಟಕೀಯವಾಗಿ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ದನಿಜೆಲ್ ಸುಬಾಸಿಕ್ 3 ಸ್ಪಾಟ್ ಕಿಕ್ ಗಳನ್ನು ಕಾಪಾಡಿದ್ದರಿಂದ ಕ್ರೊಯೇಶಿಯಾ 3-2ರ ಅಂತರದಲ್ಲಿ ಡೆನ್ಮಾರ್ಕ್ ನ್ನು ಮಣಿಸಿ ಕ್ವಾರ್ಟಲ್ ಫೈನಲ್ ಹಂತ ಪ್ರವೇಶಿಸಿತು.ಕಳೆದ ವಿಶ್ವಕಪ್ ನ ಗ್ರೂಪ್ ಡಿ ಪಂದ್ಯಕ್ಕಿಂತ ಈ ಬಾರಿ ನಾಕೌಟ್ ಪಂದ್ಯಕ್ಕೆ ಡೆನ್ಮಾರ್ಕ್ ವಿರುದ್ಧ ಕ್ರೊಯೇಶಿಯಾ 9 ಬದಲಾವಣೆಗಳನ್ನು ಮಾಡಿಕೊಂಡಿತ್ತು. ಇದರಿಂದಾಗಿ ಆಕರ್ಷಕವಾಗಿ ಆಡಿ ಅರ್ಜೆಂಟೀನಾ ತಂಡವನ್ನು 3-0 ಅಂತರಗಳಿಂದ ಮಣಿಸಿತ್ತು.10 ದಿನಗಳ ಹಿಂದೆ ಅರ್ಜೆಂಟೀನಾ ತಂಡದ ಜೊತೆ ಆಡಿ ಮಣಿಸಿದ ನಿಝ್ನಿ ನೊವ್ಗೊರೊಡ್ ಮೈದಾನದಲ್ಲಿಯೇ ಡೆನ್ಮಾರ್ಕ್ ತಂಡದ ವಿರುದ್ಧ ಕೂಡ ಆಡಿತ್ತು. ನಿನ್ನೆಯ ಪಂದ್ಯದಲ್ಲಿ ಕ್ರೊಯೇಶಿಯಾದ ರಿಯಲ್ ಮಾಡ್ರಿಡ್ ಮೊಡ್ರಿಕ್ ಮತ್ತು ಡೆನ್ಮಾರ್ಕ್ ತಂಡದ ಕ್ರಿಸ್ಟಿಯನ್ ಎರಿಕ್ಸನ್ ಆಟ ನೋಡಲು ಸೊಗಸಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ